ಅರ್ಥಪೂರ್ಣವಾಗಿ ಸಂಪನ್ನಗೊಂಡ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ: ಒಂದರಿಂದ 5 ನೇ ತರಗತಿವರೆಗೆ 16 ವಿದ್ಯಾರ್ಥಿಗಳಿರುವ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಮಕ್ಕಳ ಬಾಯಿಗೆ ಮುಖ್ಯ ಶಿಕ್ಷಕಿ ವಿದ್ಯಾ ಮಿಠಾಯಿ ನೀಡಿ, ಗೌರವಶಿಕ್ಷಕಿ ಭವ್ಯ ಪನ್ನೀರು ಚಿಮುಕಿಸಿ ಸ್ವಾಗತಿಸಿದರು.

ನಲಿಕಲಿ ತರಗತಿಯಲ್ಲಿ ಶಾಲೆಯ ಎಲ್ಲ ಮಕ್ಕಳು..ಸನಿಹದ ಅಂಗನವಾಡಿ ಸಹಿತ ಸುಮಾರು 20 ಅಕ್ಷರ ದೀಪಗಳನ್ನು ಬೆಳಗಿದರು. ಪೋಷಕರು, ಶಿಕ್ಷಣಾಭಿಮಾನಿಗಳು ಸಾಕ್ಷಿಗಳಾದರು.

ಸರಕಾರಿ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆ , ಮಂಗಳೂರು ಇಲ್ಲಿಯ ಉಪನ್ಯಾಸಕರಾದ ಕುಮಾರಸ್ವಾಮಿ ಪೋಷಕರೊಡನೆ ಮಕ್ಕಳ ಶಿಕ್ಷಣದ ಬಗ್ಗೆ ಸಂವಾದ ನಡೆಸಿದರು.

ನಿಯೋಜಿತ ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಕಾರ್ಕಳ ಇವರಿಂದ ಸ್ವಾಗತ ಮತ್ತು ಧನ್ಯವಾದ, ಗೌರವ ಶಿಕ್ಷಕಿ ಭವ್ಯರವರಿಂದ ನಿರೂಪಣೆ ನಡೆಯಿತು.

ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ದಯಾನಂದ ಮತ್ತು ಉಪಾಧ್ಯಕ್ಷೆಯವರಾದ ಶಾರದಾ ಉಪಸ್ಥಿತರಿದ್ದರು.

ಅಕ್ಷರ ದಾಸೋಹ ಸಿಬ್ಬಂದಿ ಶಶಿಕಲಾರಿಗೆ ಗೌರವ ಸಲ್ಲಿಸಲಾಯಿತು.

ಮಕ್ಕಳಿಂದ ಕನ್ನಡ ನಾಡುನುಡಿಯ ಬಗ್ಗೆ ಹಾಡು. ಅಥ್ವ ಈ ಹಾಡಿನ ಮೂಲಕ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ.
ವೈವಿಧ್ಯ ಕ್ಲಾಪ್ಸ್ (ಚಪ್ಪಾಳೆ ಏಳೆಂಟು ವಿಧ ) ಮೂಲಕ ಕುಮಾರಸ್ವಾಮಿ ಸರ್ ರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ. ಅಥ್ವ ಸರ್ ರಿಗೆ ವಿಶೇಷ ಸ್ವಾಗತ ಮಕ್ಕಳಿಂದ ಗಮನ ಸೆಳೆಯಿತು.

ಮಾತು ಆರಂಭದ ಮುನ್ನ ಕುಮಾರಸ್ವಾಮಿ ಭಾವುಕರಾದದ್ದು.. ಶಾಲೆ ಹೇಗಿರಬೇಕು, ಅಲ್ಲಿ ಮಕ್ಕಳೊಡನೆ ಶಿಕ್ಷಕರು ಹೇಗಿರ್ಬೇಕು ಅಂತೆಲ್ಲ ಏನೇನೋ ಯೋಚಿಸ್ತೇವೆ. ಆದರೆ ಅದೆಲ್ಲ ಎಲ್ಲೂ ನೋಡ್ಲಿಕ್ಕೆ ಸಿಗುವುದಿಲ್ಲ. ಇಲ್ಲಿ ಅಂತಹ ಪ್ರೀತಿಯ ವಾತಾವರಣ ಇದೆ. ಪೋಷಕರ, ಊರಿನವರ ಸಹಭಾಗಿತ್ವ ತುಂಬ ಚೆನ್ನಾಗಿದೆ.ನೋಡಿದರೆ ಹೃದಯ ತುಂಬಿ ಬಂದಿತು ಎಂದರು.

ಮಕ್ಕಳಿಗೆ ಮನೆಕೆಲಸ ಹೇರುವುದೇ ಶಿಕ್ಷಣವಲ್ಲ. ಮಗು ಕಲಿಯಲು ಶಿಕ್ಷಿಸಬೇಕೆಂದಿಲ್ಲ. ಮಕ್ಕಳು ಹಿರಿಯರನ್ನು ಅನುಕರಿಸುತ್ತಾರೆ. ಚಿಕ್ಕಮಕ್ಕಳಿಗೆ ಪುಸ್ತಕದ ಪಾಠ ಮಾತ್ರವಲ್ಲ.. ಅಲ್ಲಲ್ಲಿ ಕಸ ಹಾಕಬಾರದು , ಸಹಪಾಠಿಗಳೊಡನೆ ಹೊಂದಾಣಿಕೆ ಹೇಳಿಕೊಡುವುದು ಕೂಡ ಶಿಕ್ಷಣದ ಭಾಗವೇ ಆಗಿದೆ ಎಂದರು.

ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಹೊಸ ಶೈಕ್ಷಣಿಕ ವರ್ಷದ ಶಾಲೆಯ ಹೊಸ ಯೋಜನೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ವಿಷಯದಲ್ಲಿ ಪೋಷಕರು ಮತ್ತು ಶಾಲೆಯ ಸಂಬಂಧಿತವಾಗಿ ಇರುವ ಹೊಣೆಗಾರಿಕೆ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡ ಜೊತೆಗೂಡಿ ಉಣ್ಣುವಿಕೆ, ಶಾಲೆಯ ಅಂಗಳದಲ್ಲಿ ಬೆಳೆದ ಹಲಸಿನಕಾಯಿ ಪದಾರ್ಥ, ಪಾಯಸ ಮತ್ತು ಮೈಸೂರುಪಾಕ್ ಸವಿಯೂಟದಲ್ಲಿ ಮುದನೀಡಿತು.

ಉಡುಪಿಯ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿಯವರು ನೀಡಿದ 3000 ರೂ.ಮೌಲ್ಯದ ಗ್ರೀನ್ ಬೋರ್ಡ್ ಕೊಡುಗೆಯ ಅನಾವರಣ,
5 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು 2023-24 ನೇ ಸಾಲಿನವರು ನೀಡಿದ ಕೊಡುಗೆ ಶಾಲಾ ಘಂಟೆ 5 ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಂದ ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ಫ್ರೆಂಡ್ಸ್ ಕ್ಲಬ್ ಹೊಸಪಟ್ಣ ಇವರ ಸಹಭಾಗಿತ್ವ ಇತ್ತು. ಕಾರ್ಯಕ್ರಮಕ್ಕೆ ಫ್ರೆಂಢ್ಸ್ ಕ್ಲಬ್ ನ ಯುವಮಿತ್ರರ ಬಳಗದವರಾದ ಅಶ್ವಿಥ್ ಇತ್ಯಾದಿಯವರು ಉಪಸ್ಥಿತರಿದ್ದರು ಅಥ್ವ ಭಾಗವಹಿಸಿದ್ದರು.