ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024ಕ್ಕೆ ಆಕ್ಷೇಪಣೆ ಕೋರಿ ಪ್ರಭಾಕರ ಪ್ರಭು ಮನವಿ(ವರದಿ:ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2024ಕ್ಕೆ ಅಕ್ಷೇಪಣೆ ಕೋರಿ ಸಿದ್ದಕಟ್ಟೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಅವರು ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.


ಕರ್ನಾಟಕ ಘನ ಸರಕಾರವು ,ಸಹಕಾರ ಇಲಾಖೆಗೆ ಸಂಬಂಧಿಸಿದಂತೆ,ಸಹಕಾರ ಸಂಘಗಳ ಕಾಯಿದೆ ತಿದ್ದುಪಡಿಗೆ ಹೊರಟಿರುವುದರಲ್ಲಿನ ಕೆಲವೊಂದು ಅಂಶಗಳ ಬಗ್ಗೆ ಅಕ್ಷೇಪ ಸಲ್ಲಿಸುತ್ತಾ ತಿದ್ದುಪಡಿ ಮಸೂದೆಯಲ್ಲಿನ ಕೆಲವು ಅಂಶಗಳನ್ನು ಕೈಬಿಡಬೇಕೇಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
1) ಸಂಘದ ಸದಸ್ಯನು ಯಾವುದೇ ನಿಧಿ ಅಥವಾ ಬಡ್ಡಿ ಸಹಾಯಧನ ಅಥವಾ ಪ್ರೋತ್ಸಾಹ ಧನವನ್ನು ಪಡೆದಿದ್ದಲ್ಲಿ ಅಂತಹ ಸಂಘವನ್ನು ನೆರವು ಪಡೆದ ಸಂಘ ಎಂದು ಪರಿಗಣಿಸುವುದರಿಂದ ಇಡೀ ಸಂಘವನ್ನು ಸರಕಾರದ ಹತ್ತೋಟಿಗೆ ತರುವ ದುರುದ್ದೇಶವಾಗಿರುವುದರಿಂದ ಈ ತಿದ್ದುಪಡಿ ವಿಧೇಯಕವನ್ನು ಪ್ರಸ್ತಾವನೆಯಿಂದ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
2)ಸಂಘದ ಸದಸ್ಯನು ಚುನಾವಣೆಯಲ್ಲಿ ಭಾಗವಹಿಸಲು ಯಾವುದೇ ಮಹಾಸಭೆಗೆ ಹಾಜರಾಗಬೇಕೇಂದಿಲ್ಲ ಹಾಗೂ ಸಂಘದ ಯಾವುದೇ ವ್ಯವಹಾರವನ್ನು ಮಾಡಬೇಕೇಂದಿಲ್ಲ . ಸದಸ್ಯತ್ವ ಹೊಂದಿದ ಎಲ್ಲರಿಗೂ ಮತದಾನದ ಹಕ್ಕು ಇರುತ್ತದೆ. ಇದರಿಂದಾಗಿ ಮಹಾಸಭೆಯಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆ ತೀರಾ ಕಡಿಮೆ ಆಗಲಿದ್ದು,ಮಹಾಸಭೆಗಳೇ ಕಾಟಚಾರಕ್ಕೆ ಆಗಲಿವೆ. ಸದಸ್ಯರು ಸಂಘದಲ್ಲಿ ಯಾವುದೇ ವ್ಯವಹಾರವನ್ನು ಮಾಡದೇ ಇರುವುದರಿಂದ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಪೆಟ್ಟು ಬೀಳಲಿದ್ದು. ಈ ಪ್ರಸ್ತಾವಿತ ಈ ತಿದ್ದುಪಡಿ ವಿಧೇಯಕದಿಂದ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
3)ಸಹಕಾರ ಸಂಘಗಳಿಗೆ ಮೂವರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ಚುನಾವಣೆಗಳಲ್ಲಿ ಮತದಾನದ ಹಕ್ಕು,ಹಾಗೂ ಅಧ್ಯಕ್ಷ /ಉಪಾಧ್ಯಕ್ಷ ಚುನಾವಣೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಂಡುವುದರಿಂದ ,ಪ್ರಜಾಪ್ರಭುತ್ವದ ಮೂಲ ಉದ್ದೇಶಗಳನ್ನು ಬುಡಮೇಲು ಮಾಡಿದಂತಾಗಲಿದ್ದು,ಸರ್ವಾಧಿಕಾರದ ಧೋರಣೆಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಪ್ರಸ್ತಾವಿತ ಈ ತಿದ್ದುಪಡಿ ವಿಧೇಯಕದಿಂದ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
4)ಸಹಕಾರ ಸಂಘಗಳ ಸಿಬ್ಬಂದಿ ನೇಮಕಾತಿ ವರ್ಗಾವಣೆ ,ಭಡ್ತಿ ಸೇರಿದಂತೆ ಶಿಸ್ತು ಕ್ರಮಗಳನ್ನು ಚಲಾಯಿಸವ ಅಧಿಕಾರವನ್ನು ಸಂಘದ ಆಡಳಿತ ಮಂಡಳಿಯಿಂದ ತೆಗೆಯುವ ಕ್ರಮವು ಅಸಂವಿಧಾನಿಕವಾಗಿದ್ದು,ಭ್ರಷ್ಟಾಚಾರ ಲಂಚಾವತಾರಗಳಿಗೆ ಅವಕಾಶ ಕೊಟ್ಟಾಂತಾಗಲಿದ್ದು,ರೈತ ಸದಸ್ಯರು ಚುನಾಯಿಸಿದ ಆಡಳಿತ ಮಂಡಳಿಯನ್ನು ಕತ್ತಲೆಯಲ್ಲಿಟ್ಟು,ದಬ್ಬಾಳಿಕೆಗೆ ಮತ್ತು ಅಧಿಕಾರ ದುರುಪಯೋಗಕ್ಕೆ ಎಡೆಮಾಡಿಕೊಟ್ಟಾಂತಾಗುತ್ತದೆ. ತಕ್ಷಣದಿಂದಲೇ ಪ್ರಸ್ತಾವಿತ ಈ ತಿದ್ದುಪಡಿ ವಿಧೇಯಕದಿಂದ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ)ವಿಧೇಯಕ 2024ನ್ನು ಕೈ ಬಿಟ್ಟು ಸಹಕಾರ ಸಂಘಗಳನ್ನು ಪಾರದರ್ಶಕತೆಯಿಂದ ಆಡಳಿತ ನಡೆಸಲು ಅನುವು ಮಾಡಿಕೊಡಬೇಕಾಗಿ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.