ಪುರಸಭೆಯ ನಿಯಾಮಾವಳಿಗಳನ್ನು ಉಲ್ಲಂಘಿಸಿ ಬಂಟ್ವಾಳದಲ್ಲಿ ನಿರ್ಮಿಸಿರುವ ಕಟ್ಟಡದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ( ವರದಿ: ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಉದ್ಯಮಿಯೊಬ್ಬರು ಬಂಟ್ವಾಳದಲ್ಲಿ ಪುರಸಭೆಯ ಪರವಾನಿಗೆಯ ನಿಯಾಮಾವಳಿ ಮೀರಿ ಕಟ್ಟಡ ನಿರ್ಮಿಸಿರುವ ಬಗ್ಗೆ ತುರ್ತು ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ದ.ಕ.ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಬಂಟ್ವಾಳದ ಜವುಳಿ ಉದ್ಯಮಿ ಬಿ.ಕಸಬಾ ಗ್ರಾಮದ ಬಂಟ್ವಾಳ ಬೈಪಾಸ್ ನಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಇದು ಪರವಾನಿಗೆಯನ್ನು ಉಲ್ಲಂಘಿಸಿದ ಅಕ್ರಮ ಕಟ್ಟಡವಾಗಿದೆ. ಇದಕ್ಕೆ ಪುರಸಭೆಯ ಕೆಲವು ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ಇವರ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ ಕಸ್ಬಾದ ಬಂಟ್ವಾಳ ಬೈಪಾಸ್ ಹತ್ತಿರ ಇರುವ ಸರ್ವೇ ನಂಬರ್ 121/25C1P2 ನಲ್ಲಿ ಪ್ರಕಾಶ್ ಅಂಚನ್ ಬಿನ್ ಕೊರಗಪ್ಪ ಪೂಜಾರಿ, ಸರಿತಾ ಕೋಂ. ಪ್ರಕಾಶ್ ಅಂಚನ್ ಎಂಬವರು ವಾಣಿಜ್ಯ ಉದ್ದೇಶದಿಂದ -1 ಮತ್ತು ನೆಲ ಅಂತಸ್ತು ಒಳಗೊಂಡ 4 ಅಂತಸ್ಸಿನ ಕಟ್ಟಡ ನಿರ್ಮಿಸಿ ಇದೀಗ ಉದ್ಘಾಟನೆಗೆ ಸಜ್ಜಾಗಿದೆ. ಈ ಕಟ್ಟಡದ ನಿರ್ಮಾಣಕ್ಕೆ ಪುರಸಭೆಯು ನೀಡಿದ ಅನುಮತಿಯನ್ನು ಸಂಪೂರ್ಣ ಉಲ್ಲಂಘನೆ ಮಾಡಿ ಕಟ್ಟಡವನ್ನು ಕಟ್ಟಲಾಗಿದೆ. ಇದೀಗ ಕಟ್ಟಡವು ಅನುಮತಿ ಪತ್ರಗಿಂತ ಅತಿ ಹೆಚ್ಚು ದೊಡ್ಡದಾಗಿರುವುದು ಕಂಡು ಬಂದಿದೆ.

ಅಲ್ಲದೆ ಕಟ್ಟಡದಲ್ಲಿ ಅಗ್ನಿ ದುರಂತಗಳು ನಡೆದರೆ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಯಾವುದೇ ನಷ್ಟಗಳು ಆಗಬಾರದೆಂದು ಕಟ್ಟಡದ ಸುತ್ತಮುತ್ತ ಅಗ್ನಿಶಾಮಕ‌ ದಳದ ವಾಹನ ಓಡಾಡಲು ಮತ್ತು ರಕ್ಷಣಾ ಕಾರ್ಯಕ್ಕಾಗಿ 5-6 ಮೀಟರ್ ನಷ್ಟು ಸ್ಥಳಾವಕಾಶ ಬಿಡಬೇಕೆಂದು ಕಟ್ಟಡದ ನಿರ್ಮಾಣದ ವೇಳೆ ಪುರಸಭೆಯು ಅನುಮತಿ ಪತ್ರದಲ್ಲಿ ಸ್ಪಷ್ಟವಾಗಿ ಮುನ್ನೆಚರಿಕೆಯನ್ನು ನೀಡಿದ್ದರೂ ಅಂತಹ ಯಾವುದೇ ಸ್ಥಳಾವಕಾಶವನ್ನು ಇಲ್ಲಿ ಬಿಡದೆ ನಿಯಾಮಾವಳಿಯನ್ನು ಉಲ್ಲಂಘಿಸಲಾಗಿದೆ.

ಇದೀಗ ಕಟ್ಟಡ ಸಂಪೂರ್ಣ ನಿರ್ಮಾಣವಾದ ಮೇಲೆ ಪುರಸಭೆಯು ಕಟ್ಟಡಕ್ಕೆ ಅನುಮತಿ ನೀಡಿದಾಗಿನ ನಿಯಾಮಾವಳಿಗಳನ್ನು‌ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

ಟ್ಯಾರೀಸ್ ಮೇಲೆ ಅನುಮತಿ‌ ಇಲ್ಲದೇನೇ ಹೆಚ್ಚುವರಿ ಸೀಟ್ ಅವಳಡಿಕೆಯ ಕಾರ್ಯ ನಡೆದಿದೆ.‌ -1 ಅಂತಸ್ತು ಅನುಮತಿ‌ ಇಲ್ಲದೇನೆ ನಿರ್ಮಿಸಿರುವುದು, ನೆಲ ಅಂತಸ್ತು ಸಹಿತ ಕೆಲ ಅಂತಸ್ತುಗಳು ಅನುಮತಿ ಪತ್ರಕ್ಕಿಂತ ದೊಡ್ಡದಾಗಿರುವುದು ಬೆಳಕಿಗೆ ಬಂದಿದೆ.

ಕಟ್ಟಡವು ಪುರಸಭೆಯು ಆರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿದ ಅನುಮತಿ ಪತ್ರ ಹಾಗೂ ಕಟ್ಟಡ ನಿರ್ಮಾಣವಾದ ಮೇಲೆ ನೀಡಿದ ಅನುಮತಿ ಪತ್ರದ ಪ್ರಕಾರ ಕಟ್ಟಡವು ಸಂಪೂರ್ಣ ಅಕ್ರಮವಾಗಿದೆ ಎಂದು ಪುರಸಭೆ ನೀಡಿದ ಅನುಮತಿಗಳು ಪತ್ರಗಳು ಸ್ಪಷ್ಟವಾಗಿ ಹೇಳುತ್ತಿದೆ.

ಈಗಾಗಲೇ ಪುರಸಭೆಯ ಅಧಿಕಾರಿಗಳು ಕಟ್ಟಡದ ತನಿಖೆ ನಡೆಸಿದ್ದು ನಿಯಾಮಾವಳಿಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.

ಈ ಕಟ್ಟಡದ ಬಗ್ಗೆ ಮತ್ತು ಈ ಕಾರ್ಯಕ್ಕೆ ಬೆಂಬಲವಾಗಿ ನಿಂತ ಬಂಟ್ವಾಳ ಪುರಸಭೆಯ ಅಧಿಕಾರಿಗಳ ವಿರುದ್ಧವೂ ತುರ್ತು ಕ್ರಮ ಕೈಗೊಳ್ಳಬೇಕಾಗಿ ಪದ್ಮನಾಭ ಸಾಮಂತ್ ವಾಮದಪದವು ಒತ್ತಾಯಿಸಿದ್ದಾರೆ.