ಫೆಬ್ರವರಿ 14ರಿಂದ 17ರ ವರೆಗೆ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ (ವರದಿ:ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಫೆಬ್ರವರಿ 14ರಿಂದ 17ರ ವರೆಗೆ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವವು ವಿಜೃಂಭಣೆಯಿಂದ ವೈಭವಯುತವಾಗಿ ಸಂಪನ್ನಗೊಳ್ಳಲಿದೆ.


ಫೆಬ್ರವರಿ 14 ರಂದು ಸಂಜೆ ಧ್ವಜಾರೋಹಣ ಮತ್ತು ಸಂಕ್ರಾಂತಿ ಸೇವೆ, ಯಕ್ಷಗಾನ, ಅನ್ನಸಂತರ್ಪಣೆ, ದೈವಂಕುಳ ನೇಮೋತ್ಸವ, ಫೆಬ್ರವರಿ 15ರಂದು ರಾತ್ರಿ ಅನ್ನಸಂತರ್ಪಣೆ, ಕಡಂಬಿಲ್ತಾಯಿ, ಕೊಡಮಣಿತ್ತಾಯಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.


ಫೆಬ್ರವರಿ 16ರಂದು ಬೆಳಿಗ್ಗೆ ಶ್ರೀ ಸೂಕ್ತ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಅನ್ನಸಂತರ್ಪಣೆ, ಬೈದೆರ್ ಗಳು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾನಿಬಾಲೆ ನೇಮೋತ್ಸವ, ಟೀಮ್ ಗರೋಡಿ ಕಕ್ಯಪದವು ನೇತೃತ್ವದಲ್ಲಿ ತೆಲಿಕೆದ ಕಲಾವಿದೆರ್ ಕೊಯಿಲ ಇವರಿಂದ ಗೆಂದಗಿಡಿ ಸಾಮಾಜಿಕ ನಾಟಕ ನಡೆಯಲಿದೆ.
ಫೆಬ್ರವರಿ 17 ರಂದು ಬೆಳಿಗ್ಗೆ ಕೊಡಮಣಿತ್ತಾಯಿ ಸ್ಥಾನದಲ್ಲಿ ನವಕ ಕಲಶ ಪ್ರಧಾನ ಹೋಮ, ಹೂವಿನ ಪೂಜೆ, ನಂತರ ಅನ್ನಸಂತರ್ಪಣೆಯೊಂದಿಗೆ ಜಾತ್ರೋತ್ಸವವು ಅದ್ಧೂರಿಯಾಗಿ ಸಮಾಪನಗೊಳ್ಳಲಿದೆ.
ಸದ್ಭಕ್ತರೆಲ್ಲರೂ ಭಾಗವಹಿಸಿ ತನುಮನಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೈವ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಡೀಕಯ್ಯ ಕುಲಾಲ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.