ಫೆಬ್ರವರಿ 14 ಮತ್ತು 15ರಂದು ನಾಯರ್ಕುಮೇರು ಪಿಲಿಚಾಮುಂಡಿಗೋಳಿ ಮತ್ತು ಕೊರಗಟ್ಟೆಯಲ್ಲಿ ದೊಂಪದ ಬಲಿ ನೇಮೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಕೊಡಮಣಿತ್ತಾಯ, ಸಪರಿವಾರ ದೈವಗಳ ಗಡಿಪಾಡಿ ಸ್ಥಳಗಳ ಪುನರ್ ನಿರ್ಮಾಣ ಸಮಿತಿ ಆಶ್ರಯದಲ್ಲಿ ಪುನರ್ ನಿರ್ಮಾಣಗೊಂಡಿರುವ ನಾಯರ್ಕುಮೇರು ಪಿಲಿಚಾಮುಂಡಿಗೋಳಿ ಮತ್ತು ಕೊರಗಟ್ಟೆ ಗಡಿಪಾಡಿ ಸ್ಥಳದಲ್ಲಿ ಫೆಬ್ರವರಿ 14 ಮತ್ತು15ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ
ಇತ್ತೀಚೆಗೆ ಕೊರಗಟ್ಡೆ ಗಡಿಪಾಡಿ ಸ್ಥಳದಲ್ಲಿ ನಡೆಯಿತು.

ಹಿರಿಯರಾದ ಜಗದೀಶ ಬಲ್ಲಾಳ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಲ್ಲಾಳ ಮನೆತನದ ಪ್ರಮುಖರಾದ ರಾಘವೇಂದ್ರ ಬಲ್ಲಾಳ್ ಕೌಡಂಬಾಡಿ,
ಸಮಿತಿ ಅಧ್ಯಕ್ಷ ರಾಮಣ್ಣ ಪೂಜಾರಿ ಗಂಟೆರಬೆಟ್ಟು, ಗೌರವ ಅಧ್ಯಕ್ಷರುಗಳಾದ ವಸಂತ ಶೆಟ್ಟಿ ಕೇದಗೆ, ಶ್ಯಾಮ ಪ್ರಸಾದ್ ಪೂಂಜ ಬಾಳಿಕೆ, ಹಿರಿಯರಾದ ಶೇಖರ ಶೆಟ್ಟಿ, ಶಂಕರ್ ಶೆಟ್ಟಿ, ಪ್ರಧಾನ ಸಂಚಾಲಕ ಉದಯ ಕುಮಾರ್ ಶೆಟ್ಟಿ, ಸಂಚಾಲಕ ಆನಂದ ಮೂಲ್ಯ ಪಚ್ಚೇರು, ಕೋಶಾಧಿಕಾರಿ ಕಿಶೋರ್ ಕುಮಾರ್ ನಾಯರ್ಕುಮೇರು ಮೊದಲಾದವರು ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್ಕುಮೇರು ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್ ಕಳಸಡ್ಕ ಪ್ರಸ್ತಾಪಿಸಿ ವಂದಿಸಿದರು.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಿಲಿಚಾವುಂಡಿಗೋಳಿ( ನಾಯರ್ಕುಮೇರು) ಮತ್ತು ಕೊರಗಟ್ಟೆಯಲ್ಲಿ ಗಡಿಪಾಡಿ ಸ್ಥಳಗಳಿದ್ದು ಅನಾದಿಕಾಲದಿಂದಲೂ ಇಲ್ಲಿ ದೊಂಪದಬಲಿ ನೇಮೋತ್ಸವ ಆಗಿ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂದರ್ಭ ಇಲ್ಲಿಂದ ಭಂಡಾರ ಹೋಗಿ ನೇಮೋತ್ಸವ ನಡೆಯುತ್ತಿದ್ದದ್ದು ಪದ್ಧತಿ.


ಆದರೆ ಕಾಲಕ್ರಮೇಣ ಕಾರಣಾಂತರಗಳಿಂದ ಇದು ನಿಂತು ಹೋಗಿದ್ದು ಇದೀಗ ಪ್ರಶ್ನಾಚಿಂತನೆಯಲ್ಲಿ‌ ಕಂಡು ಬಂದಂತೆ ಗಡಿಪಾಡಿ ಸ್ಥಳಗಳನ್ಮು ಪುನರ್ ನಿರ್ಮಿಸಿ ಫೆಬ್ರವರಿ 14 ಮತ್ತು 15ರಂದು ದೊಂಪದಬಲಿ ನೇಮೋತ್ಸವ ನಡೆಸುವುದೆಂದು ಭಕ್ತಾದಿಗಳು ಸೇರಿ ಸಂಕಲ್ಪಿಸಲಾಗಿದೆ. ಭಕ್ತಾದಿಗಳು
ಸಾನಿಧ್ಯದ ಪುನರ್ ನಿರ್ಮಾಣ ಯೋಜನೆಗಳು ಮತ್ತು ದೊಂಪದ ಬಲಿ ನೇಮೋತ್ಸವ ಯಶಸ್ವಿಯಾಗಿ ನೆರವೇರಲು ಸೂಕ್ತ ಸಲಹೆ- ಸೂಚನೆ, ಸಹಕಾರವನ್ನು ನೀಡಿ ಶ್ರೀ ದೈವಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಮಿತಿಯ ಪ್ರಕಟಣೆ ತಿಳಿಸಿದೆ.