ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆಬ್ರವರಿ 6 ರಿಂದ 8ರ ತನಕ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ????)

????????????????????????
ಬಂಟ್ವಾಳ: ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆಬ್ರವರಿ 6 ರಿಂದ 8ರ ತನಕ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಫೆಬ್ರವರಿ 6ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಪಡುಸವಾರಿ, ದುರ್ಗಾ ನೃತ್ಯಾಲಯ ಮಂಜೇಶ್ವರ ಇವರಿಂದ ನಾಟ್ಯ ವೈಭವ, ಮೂಡುಪಡುಕೋಡಿ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ‌ ನಡೆಯಲಿದೆ.

ಫೆಬ್ರವರಿ 7ರಂದು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಪಾಂಗಲ್ಪಾಡಿ ಇದರ ವತಿಯಿಂದ46ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ದರ್ಶನೋತ್ಸವ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಸಂಜೆ ಮೂಡು ಸವಾರಿ, ಕೊರಗಟ್ಡೆ ಹಾಗೂ ಅಕ್ಷರ ಭಾರತಿ ಶಾಲಾ ಮಕ್ಕಳಿಂದ ನಾಟ್ಯ ವೈಭವ ಜರುಗಲಿದೆ.

ಫೆಬ್ರವರಿ 8ರಂದು ಬೆಳಿಗ್ಗೆ ವಿಷ್ಣುಯಾಗ,ತುಲಾಭಾರ ಸೇವೆ, ಸಂಜೆ ಶ್ರೀನಿವಾಸನಗರ ಮತ್ತು ಮೇಲ್ಪೆತ್ತರ ಶಾಲಾ ಮಕ್ಕಳಿಂದ ನೃತ್ಯ ಸಿಂಚನ, ರಾತ್ರಿ ಧಾರ್ಮಿಕ ಸಭೆ, ವಿಷ್ಣುಪ್ರಸಾದ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ, ಶ್ರೀ ದೇವರ ಮಹೋತ್ಸವ, ದೈವಗಳ ಗಗ್ಗರ ಸೇವೆ, ದೇವರ ಹಾಗೂ ದೈವಗಳ ಭೇಟಿ, ಓಕುಳಿ ಉತ್ಸವ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಅಭಿನಯಿಸುವ ಸಂಕಲೆ ನಾಟಕ ನಡೆಯಲಿದೆ.

ಪ್ರತಿದಿನ ವಿವಿಧ ವೈಧಿಕ, ಧಾರ್ಮಿಕ‌ ಕಾರ್ಯಕ್ರಮಗಳು, ಭಜನಾ ಸಂಕೀರ್ತಣೆ, ಅನ್ನಸಂತರ್ಪಣೆ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನುಮನಧನಗಳಿಂದ ಸಹಕರಿಸಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಎಸ್ ಮತ್ತು ಸಮಿತಿ ಪ್ರಕಟಣೆ ತಿಳಿಸಿದೆ.????????????????