ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘ ಹಲ್ಲೆ ಪ್ರಕರಣ-ತು.ರ.ವೇ. ಖಂಡನೆ ———–+++++++———+++++ ಗೋಪಾಲ ಅಂಚನ್-ಯುವಧ್ವನಿ ನ್ಯೂಸ್ ಕರ್ನಾಟಕ +——-++++++++———+++++

ಬಂಟ್ವಾಳ:
ವಾಮದಪದವು ಹಾಲು ಉತ್ಪಾದಕರ ಸಂಘದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಖಂಡಿಸಿದ್ದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.


ದಿನಾಂಕ 11-01-2024ರಂದು ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಚೌಟ ಮತ್ತು ಸಂಘದ ಸಿಬ್ಬಂದಿ ಹರಿಶ್ಚಂದ್ರ ಶೆಟ್ಟಿಯವರು ಸಂಘದ ಸದಸ್ಯೆ ದಿವ್ಯ.ಜೆಯವರ ಪತಿ ರಂಜಿತ್ ಗಟ್ಟಿಯವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದು ಖಂಡನಾರ್ಹವಾಗಿದೆ. ಹಾಲು ಉತ್ಪಾದಕ ಸಂಘದ ಆಡಳಿತ ಮಂಡಳಿ ಸದಸ್ಯರ ಮೇಲೆ ಹಲ್ಲೆ ಮಾಡಿದವರನ್ನು ಕೆಲಸದಿಂದ ತಕ್ಷಣ ತೆಗೆಯಬೇಕು.

ತೆಗೆಯದಿದ್ದರೆ ತು.ರ.ವೇ ವಾಮದಪದವು ಘಟಕದ ವತಿಯಿಂದ ಸಂಘದ ಎದುರುಗಡೆ ಪ್ರತಿಭಟನೆ ಮಾಡಲಾಗುವುದು ಎಂದು ತು.ರ.ವೇ ವಾಮದಪದವಿನ ಅಧ್ಯಕ್ಷ ಹರೀಶ್ ಪೂಜಾರಿ ತಿಳಿಸಿದ್ದಾರೆ.‌ ವಾಮದಪದವು ಹಾಲು ಉತ್ಪಾದಕರ ಸಂಘಕ್ಕೆ ಹಾಲು ಕೊಂಡೊಯ್ಯಲು ರೈತರು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಮದಪದವು ಹಾಲು ಉತ್ಪಾದಕ ಸದಸ್ಯರ ಸಮಸ್ಯೆಯನ್ನೂ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರಿನ ಆಡಳಿತ ಮಂಡಳಿಯ ಗಮನಕ್ಕೆ ತರಬೇಕೆಂದು ಮಹಿಳಾ ಘಟಕದ ಅಧ್ಯಕ್ಷ ಚೈತ್ರ.ಡಿ. ಶೆಟ್ಟಿ ಉಳಗುಡ್ಡೆ ಒತ್ತಾಯಿಸಿದ್ದು ವಾಮದಪದವು ಹಾಲು ಉತ್ಪಾದಕ ಸಂಘದ ಸದಸ್ಯರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿದ್ದಾರೆ.
——–++++++——+++++++
ಗೋಪಾಲ ಅಂಚನ್