ಆಲದಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಹಾಗೂ ಅಪಾರ ಜನಸ್ತೋಮದೊಂದಿಗೆ ಸಂಪನ್ನಗೊಂಡ ಅದ್ಧೂರಿ ಯಕ್ಷಗಾನ ಬಯಲಾಟ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಬಂಟ್ವಾಳ: ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಲದಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಗುರುಪೂಜೆ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಗುರುಪೂಜೆಯ ಅಂಗವಾಗಿ ನಡೆಸಲಾದ “ಅಮರ ಬೀರೆರ್ ಕೋಟಿ ಚೆನ್ನಯೆರ್ ಸೌಹಾರ್ದ ಕ್ರೀಡಾಕೂಟ” ದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಉದ್ಯಮಿ ಭುವನೇಶ್ ಪಚ್ಚಿನಡ್ಕ, ಸಹಕಾರಿ ನೇತಾರ ಮೋನಪ್ಪ ಪೂಜಾರಿ ಕಂಡೆತ್ಯಾರು, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಂಗೇರಾ ಕಲ್ಲುಕೊಡಂಗೆ, ಸ್ಥಳದಾನಿ ಮೋನಪ್ಪ ಪೂಜಾರಿ ಪಾಲೆದಡಿ, ಹಿರಿಯರಾದ ಅಣ್ಣಿ ಪೂಜಾರಿ ಬೆಟ್ಟುಗದ್ದೆ, ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ, ಪ್ರಧಾನ ಕಾರ್ಯದರ್ಶಿ ಚಂದಪ್ಪ ಪೂಜಾರಿ ಆಗಮೆ, ಯಕ್ಷಗಾನ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಕಾರ್ಯದರ್ಶಿ ಕಿರಣ್ ಕೋಟ್ಯಾನ್ ಎರ್ಮೆನಾಡು, ಸಂಘದ ಪ್ರಮುಖರಾದ ಕಿಶೋರ್ ಕುಮಾರ್ ನಾಯರ್ಕುಮೇರು, ಜನಾರ್ಧನ ಪೂಜಾರಿ ತಿಮರಡ್ಡ, ಪುಷ್ಪಾವತಿ ವಿಶ್ವನಾಥ ಪೂಜಾರಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕರಾಟೆ ಕ್ಷೇತ್ರದ ಸಾಧಕ ಶ್ರೇಯಸ್ ಪೂಜಾರಿಯವರನ್ನು ಗೌರವಿಸಲಾಯಿತು. ಪತ್ರಕರ್ತ ಗೋಪಾಲ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಂಜೆ 7.30ರಿಂದ ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಆಕರ್ಷಣೀಯ ವಿದ್ಯುತ್ ದೀಪಾಲಂಕಾರ, ಹಳದಿ ಧ್ವಜಗಳ ಅಲಂಕಾರ, ತಳಿರು ತೋರಣಗಳ ಶೃಂಗಾರ, ಭವ್ಯವಾದ ರಂಗ ಮಂಟಪ, ಬ್ಯಾಂಡು-ವಾದ್ಯಗಳ ಝೇಂಕಾರ, ಸುಡುಮದ್ದು ಪ್ರದರ್ಶನ ಯಕ್ಷಗಾಕ್ಕೆ ವಿಶೇಷ ಮೆರುಗು ನೀಡಿತು. ಆರಂಭದಿಂದ ಕೊನೆವರೆಗೂ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದು ಅದ್ಧೂರಿ ಯಕ್ಷಗಾನ ವೀಕ್ಷಿಸಿ ಸಂಭ್ರಮ ಪಟ್ಟರು. ಮಧ್ಯಾಹ್ಜ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಚೌಕಿ ಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಘದ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಯುವ ಕಾರ್ಯಕರ್ತರು ಗುರುಪೂಜೆ ಮತ್ತು ಯಕ್ಷಗಾನದ ಯಶಸ್ವಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318