ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಾಮದಪದವು ಪರಿಸರದ ಕ್ಯಾಶ್ಯೂ ಇಂಡಸ್ಟ್ರೀಸ್ ಗಳಿಗೆ ಭೇಟಿ ನೀಡಿ ಮತಯಾಚನೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಂಗಳವಾರ ವಾಮದಪದವು ಪರಿಸರದ ಕ್ಯಾಶ್ಯೂ ಇಂಡಸ್ಟ್ರೀಸ್ ಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರಲ್ಲಿ ಮತಯಾಚಿಸಿದರು.
ಮಾವಿನಕಟ್ಡೆಯಲ್ಲಿರುವ ಟಿ. ವರದರಾಜ್ ಪೈ ಅವರ ಯಜಮಾನ ಇಂಡಸ್ಟ್ರೀಸ್, ಆಲದಪದವಿನಲ್ಲಿರುವ ವಿನಾಯಕ ಪ್ರಭು ಅವರ ಶ್ರೀನಿವಾಸ ಕ್ಯಾಶ್ಯೂ ಇಂಡಸ್ಟ್ರೀಸ್, ನೈನಾಡಿನಲ್ಲಿರುವ ಟಿ. ಹರೀಂದ್ರ ಪೈ ಅವರ ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ಗಳಿಗೆ ಭೇಟಿ ನೀಡಿ ಕಂಪೆನಿಯಲ್ಲಿರುವ ಕೆಲಸಗಾರರ ಜೊತೆ ಸಮಾಲೋಚನೆ ನಡೆಸಿದರು.

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ-ರಾಜೇಶ್ ನಾಯ್ಕ್

ಕಳೆದ ಅವಧಿಯಲ್ಲಿ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿದ್ದೀರಿ. ನನ್ನ ಶಾಸಕತ್ವದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಸಮೃದ್ದ ಮತ್ತು ಶಾಂತಿಯುತ ಬಂಟ್ವಾಳಕ್ಕೆ ಶ್ರಮಿಸಿದ್ದೇನೆ. ಮತ್ತೊಮ್ಮೆ ನೀವು ನನ್ನನ್ನು ಆಶೀರ್ವದಿಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ರಾಜೇಶ್ ನಾಯ್ಜ್ ಹೇಳಿದರು.

ಸರಳ ಸಜ್ಜನಿಕೆಯ ನಿಸ್ವಾರ್ಥ ಮನೋಭಾವನೆಯ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಗೆಲ್ಲಿಸಿ-ಸುಲೋಚನಾ ಜಿ.ಕೆ.ಭಟ್

ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್ ಮಾತನಾಡಿ,2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ರಾಜೇಶ್ ನಾಯ್ಕ್ ಅವರು ನುಡಿದಂತೆ ನಡೆದು ಕ್ಷೇತ್ರದಲ್ಲಿ ರಾಜಧರ್ಮದ ಆಡಳಿತ ಮಾಡಿದ್ದಾರೆ. ಕ್ಷೇತ್ರದ ಜನರ ಧ್ವನಿಯಾಗಿ ಹಗಲು ರಾತ್ರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ದಿನಕ್ಕೆ ಒಂದರಂತೆ ರಸ್ತೆ ನಿರ್ಮಾಣ ಸಹಿತ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ಸರಳ ಸಜ್ಜನಿಕೆಯ ನಿಸ್ವಾರ್ಥ ಮನೋಭಾವನೆಯ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಸಮೃದ್ಧ ಮತ್ತು ಶಾಂತಿಯುತ ಬಂಟ್ವಾಳ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಸಂಸ್ಥೆಗಳ ಮಾಲಕರಾದ ಟಿ.ವರದರಾಜ ಪೈ, ವಿನಾಯಕ ಪ್ರಭು, ಟಿ.ಹರೀಂದ್ರ ಪೈ, ಪಕ್ಷದ ಪ್ರಮುಖರಾದ ರತ್ನಕುಮಾರ್ ಚೌಟ, ದಿನೇಶ್ ಶೆಟ್ಟಿ ದಂಬೆದಾರ್, ಪುರುಷೋತ್ತಮ ಶೆಟ್ಟಿ ವಾಮದಪದವು, ವಿಜಯ ರೈ ಆಲದಪದವು, ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ಶಾರದ ನಾಯ್ಕ್, ಪ್ರಭಾಕರ ಶೆಟ್ಟಿ ಹಲೆಕ್ಕೆ, ರವಿರಾಮ್ ಶೆಟ್ಟಿ ಕಂಚಾರು, ಮಹಾಬಲ ಶೆಟ್ಟಿ, ಹರೀಶ್ ಪ್ರಭು, ಚಂದ್ರಶೇಖರ್ ಶೆಟ್ಟಿ ವಾಮದಪದವು, ಪ್ರಭಾಕರ ಶೆಟ್ಟಿ ವಾಮದಪದವು, ಮೋಹನ್ ಶೆಟ್ಟಿ ನರ್ವಲ್ದಡ್ಡ, ಹರೀಶ್ ನಯನಾಡು, ದಯಾನಂದ ಎಸ್. ಎರ್ಮೆನಾಡು, ರೂಪೇಶ್ ಪೂಜಾರಿ, ಮಿಥುನ್ ಮಲ್ಯ, ಪ್ರಕಾಶ್ ರಾವ್, ರಾಘವ ಆಚಾರ್ಯ, ಸುಂದರ ಪೂಜಾರಿ, ರವಿ, ರಾಜೇಶ್ ಶೆಟ್ಟಿ, ಅಶ್ವಥ್, ಉಮೇಶ್ ಪೂಜಾರಿ ತಿಮರಡ್ಡ, ಯತೀನ್ ನಯನಾಡು, ಪುರಂದರ ಶೆಟ್ಟಿ, ಜಗದೀಶ್ ಉಳಗುಡ್ಡೆ, ಶೇಖರ್ ಶೆಟ್ಟಿ ಬದ್ಯಾರು ಮತ್ತಿತರರು ಉಪಸ್ಥಿತರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318