ಶ್ರೀನಿವಾಸನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶೋಧನಾ-2023” ವಿಶೇಷ ಬೇಸಿಗೆ ಶಿಬಿರ

ಬಂಟ್ವಾಳ: ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ಬಿ.ಸಿ.ರೋಡು, ಅಕ್ಷರ ಪ್ರತಿಷ್ಠಾನ ಮತ್ತು ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಶ್ರೀನಿವಾಸನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ “ಶೋಧನಾ-2023” ಮೂರು ದಿನಗಳ ವಿಶೇಷ ಬೇಸಿಗೆ ಶಿಬಿರ ನಡೆಯಿತು.
ಕಡ್ತಲಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಭಾಸ್ಕರ್ ಪಿ.ಕೆ.ಶಿಬಿರ ಉದ್ಘಾಟಿಸಿದರು.


ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುವುದರೊಂದಿಗೆ ಮಕ್ಕಳು ವಿವಿಧ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.
ಶ್ರೀನಿವಾಸ ನಗರ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ ಆಚಾರ್ಯ, ಶಿಬಿರ ನಿರ್ದೇಶಕ ಗೋಪಾಲ ಅಂಚನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಯರಾಮ ಶೆಟ್ಟಿ, ಸುಂದರ ನಾಯ್ಕ, ಶಿಕ್ಷಕಿಯರಾದ ಸುಚಿತ್ರ, ಮಾಲತಿ, ಗೀತಾ ಉಪಸ್ಥಿತರಿದ್ದರು.


ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಮುಖವಾಡ ತಯಾರಿಕೆ, ರಂಗ ಕಲೆ, ಸಂವಹನ ಕೌಶಲ್ಯ, ನಾಯಕತ್ವ ಕಲೆ, ಅಭಿನಯ ಗೀತೆಗಳು, ಪರಿಸರ ಜಾಗೃತಿ ರೂಪಕ, ಜನಜಾಗೃತಿ ಹಾಡುಗಳು, ರಂಗಗೀತೆಗಳು, ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಯಿತು.


ರಂಗಕಲಾವಿದರಾದ ಕೃಷ್ಣಪ್ಪ ಬಂಬಿಲ, ಗೋಪಾಲ ಅಂಚನ್, ಪ್ರತಿಮ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಶಾಲಾ ಶಿಕ್ಷಕ-ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಹಕರಿಸಿದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318