ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷ ಬೇಸಿಗೆ ಶಿಬಿರ

ಬಂಟ್ವಾಳ: ಮೂಡುಪಡುಕೋಡಿ ಗ್ರಾಮದ ಕಲಾಬಾಗಿಲು ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಮೂರು ದಿನಗಳ ವಿಶೇಷ ಬೇಸಿಗೆ ಶಿಬಿರ ನಡೆಯಿತು.
ಶಾಲಾ ಸಂಚಾಲಕ ಶೇಖ್ ರಹಮತುಲ್ಲಾ ಶಿಬಿರ ಉದ್ಘಾಟಿಸಿದರು.


ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುವುದರೊಂದಿಗೆ ಮಕ್ಕಳು ವಿವಿಧ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.


ಶಿಬಿರ ನಿರ್ದೇಶಕ ಗೋಪಾಲ ಅಂಚನ್, ಯಕ್ಷಲೋಕ ಸಾಂಸ್ಕ್ರತಿಕ ಸಂಗಮದ ಸಂಚಾಲಕಿ ಪ್ರತಿಮ ಗೋಪಾಲ ಅಂಚನ್, ಚಿತ್ರಕಲಾ ಶಿಕ್ಷಕ ಯಶು ಸ್ನೇಹಗಿರಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ‌ ಜಯಶ್ರೀ ಸಾಲ್ಯಾನ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ಉಪಸ್ಥಿತರಿದ್ದರು.


ಶಿಕ್ಷಕ ಶೇಖ್ ಜಲಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಸಜಿಪ, ಯಶು ಸ್ನೇಹಗಿರಿ, ರಂಗಕಲಾವಿದರಾದ ಕೃಷ್ಣಪ್ಪ ಬಂಬಿಲ, ಗೋಪಾಲ ಅಂಚನ್, ಪ್ರತಿಮ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.


ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಮುಖವಾಡ ತಯಾರಿಕೆ, ರಂಗ ಕಲೆ, ಸಂವಹನ ಕೌಶಲ್ಯ, ನಾಯಕತ್ವ ಕಲೆ, ಅಭಿನಯ ಗೀತೆಗಳು, ಪರಿಸರ ಜಾಗೃತಿ ರೂಪಕ, ಜನಜಾಗೃತಿ ಹಾಡುಗಳು, ರಂಗಗೀತೆಗಳು, ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಯಿತು.


ಶಾಲಾ ಶಿಕ್ಷಕ-ಶಿಕ್ಷಕಿಯರು ಶಿಬಿರದ ಯಶಸ್ವಿಯಲ್ಲಿ ಸಹಕರಿಸಿದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318