ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ “ಕನಸಿಗೊಂದು ರೆಕ್ಕೆ” ಸೃಜನಾತ್ಮಕ ಬೇಸಿಗೆ ಶಿಬಿರ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುವ “ಕನಸಿಗೊಂದು ರೆಕ್ಕೆ” ಸೃಜನಾತ್ಮಕ ಬೇಸಿಗೆ ಶಿಬಿರವು ಬುಧವಾರ ಉದ್ಘಾಟನೆಗೊಂಡಿತು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಯಶವಂತ ಪೂಜಾರಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.


ಪತ್ರಕರ್ತ ಗೋಪಾಲ ಅಂಚನ್ “ಪತ್ರಿಕಾ ವರದಿಗಾರಿಕೆ” ಮತ್ತು ಶಿಕ್ಷಕ ಬಾಲಕೃಷ್ಣ ಶೆಟ್ಟಿ “ಮುಖವಾಡ ತಯಾರಿಕೆ” ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುರಳೀಧರ ಆಚಾರ್ಯ ಸ್ವಾಗತಿಸಿದರು. ಜಯಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಜಾನೆಟ್ ಲೋಬೊ ವಂದಿಸಿದರು. ಶಿಕ್ಷಕ-ಶಿಕ್ಷಕಿಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318