ಪಾಂಗಲ್ಪಾಡಿಯಲ್ಲಿ ಉಚಿತ ವಸಂತ ತರಗತಿ ಶಿಬಿರ ಉದ್ಘಾಟನೆ

ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಶಾಖೆಯ ವತಿಯಿಂದ ಸತ್ಯನಾರಾಯಣ ಸಭಾಂಗಣದಲ್ಲಿ ನಡೆಯುವ ಮಕ್ಕಳ 12 ದಿನಗಳ ಉಚಿತ ವಸಂತ ತರಗತಿ ಶಿಬಿರವು ಬುಧವಾರ ಉದ್ಘಾಟನೆಗೊಂಡಿತು.


ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಪೂರಕವಾಗುತ್ತದೆ ಎಂದರು. ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಪುನೀತ್ ಶೆಟ್ಟಿ ಮಾತನಾಡಿ ಈ ಶಿಬಿರವು ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುವುದರೊಂದಿಗೆ ಸಂಸ್ಕಾರ ಭರಿತ ಜೀವನವನ್ನು ನಡೆಸಲು ಪ್ರೇರಣೆಯಾಗುತ್ತದೆ ಎಂದರು.


ವಾಮದಪದವು ಶಾಖೆಯ ಯೋಗ ಬಂಧು ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.
ಪಾಂಗಲ್ಪಾಡಿ ಶಾಖೆಯ ವನಿತಾ ಸ್ವಾಗತಿಸಿದರು. ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ವಂದಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318