ಎಪ್ರಿಲ್ 6ರಂದು ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ರಾಮತಾರಕ ಮಂತ್ರ ಯಾಗ

ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಎಪ್ರಿಲ್ 6ರಂದು ಪ್ರತಿಷ್ಠಾ ಮಹೋತ್ಸವ ಹಾಗೂ ರಾಮತಾರಕ ಮಂತ್ರ ಯಾಗ ನಡೆಯಲಿದೆ.

ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಭಜನಾ ತಂಡಗಳಿಂದ ಉದಯಾಸ್ತಮಾನ ಭಜನೆ, ಬೆಳಿಗ್ಗೆ 8ರಿಂದ ಗಣಯಾಗ, ರಾಮತಾರಕ ಮಂತ್ರ ಹೋಮ, ಅಪರಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಮಂಗಳೋತ್ಸವ, ಕುಡಂಬೆಟ್ಟು ಶ್ರೀ ಕೃಷ್ಣ ಬಾಲಗೋಕುಲ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈವಿಧ್ಯ, ಧಾರ್ಮಿಕ ಸಭೆ, ನಂತರ ವಿಠಲ ನಾಯಕ್ ಕಲ್ಲಡ್ಕ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ
ಚೇತನ್ ಕುಮಾರ್ ಕುದ್ಕಂದೋಡಿ ಗೌರವಾಧ್ಯಕ್ಷ, ಕಿರಣ್ ಕೋಟ್ಯಾನ್ ಹಲೆಪ್ಪಾಡಿ ಅಧ್ಯಕ್ಷ, ಡಾ.ರಾಮಕೃಷ್ಣ ಎಸ್.ಸನಂಗುಳಿ ಕಾರ್ಯಾಧ್ಯಕ್ಷ, ನಾಗೇಶ್ ಶೆಟ್ಟಿ ಎರ್ಮೆನಾಡು ಸಂಘಟನಾ ಕಾರ್ಯದರ್ಶಿ, ವಿನೋದ್ ಪೂಜಾರಿ ಹಲೆಪ್ಪಾಡಿ ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು ಕೋಶಾಧಿಕಾರಿ, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ತಂಡ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ: 9449104318