ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯಲ್ಲಿ ಎಪ್ರಿಲ್ 27ರಿಂದ 29ರವರೆಗೆ ಬ್ರಹ್ಮಕಲಶೋತ್ಸವ-ಸಮಾಲೋಚನಾ ಸಭೆ

ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯು ಜೀರ್ಣೋದ್ಧಾರಗೊಳ್ಳುತ್ತಿದ್ದು, ಎಪ್ರಿಲ್ 27ರಿಂದ 29ರವರೆಗೆ ಬ್ರಹ್ಮಕಲಶೋತ್ಸವ ನಡೆಯುವ ಹಿನ್ನೆಲೆಯಲ್ಲಿ ಭಾನುವಾರ ಸಮಾಲೋಚನಾ ಸಭೆ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ ಮಾತನಾಡಿ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸರ್ವರೂ ಕೈಜೋಡಿಸಬೇಕಾಗಿದೆ. ದೇವಸ್ಥಾನದ ಪುನರುತ್ಥಾನದ ಕಾರ್ಯ ಪುಣ್ಯಪ್ರಧವಾಗಿದ್ದು ನಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಶಕ್ತಿಮೀರಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಆಡಳಿತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಡಿ ನರ್ವಲ್ದಡ್ಡ, ಕಾರ್ಯಾಧ್ಯಕ್ಷ ಜಿ.ಕೆ.ಭಟ್, ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್, ಡಾ. ಶಿವಪ್ರಸಾದ್ ಭಟ್, ಉಧ್ಯಮಿ ಟಿ.ಹರೀಂದ್ರ ಪೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್, ಅಧ್ಯಕ್ಷ ಡಾ. ರಾಮಕೃಷ್ಣ ಎಸ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗ ಶೆಟ್ಟಿ ನರ್ವಲ್ದಡ್ಡ, ಅಧ್ಯಕ್ಷ ಬೂಬ ಸಪಲ್ಯ ಮುಂಡಬೈಲು, ಸಂಚಾಲಕ ಗೋಪಾಲ ಅಂಚನ್ ಮೊದಲಾದವರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಆರ್ಥಿಕ ಕ್ರೋಡಿಕರಣಕ್ಕೆ ಎಲ್ಲರೂ ಪ್ರಯತ್ನ ಮಾಡವುದು, ಅನ್ನಸಂತರ್ಪಣೆ-ಪುಷ್ಪಲಂಕಾರದ ದಾನಿಗಳನ್ನು ಸಂಪರ್ಕಿಸುವುದು, ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆಗೆ ಜಾಹೀರಾತು ಸಂಗ್ರಹಿಸುವುದು, ಈಗಾಗಲೇ ನಿರಂತರ ಶ್ರಮಾದಾನ ನಡೆಯುತ್ತಿದ್ದು ಇನ್ನಷ್ಟು ಮಂದಿ ಶ್ರಮಾದಾನದಲ್ಲಿ ಭಾಗವಹಿಸುವುದು ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಬ್ರಹ್ಮಕಲಶೋತ್ಸವದ ಪ್ರಥಮ ದಿನ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮ, ಎರಡನೇ ದಿನ ಇಡೀ ದಿನ ವಿವಿಧ ಭಜನಾ ತಂಡಗಳಿಂದ ಭಜನೆ, ರಾತ್ರಿ ಧಾರ್ಮಿಕ ಸಭೆ, ಸಾಂಸ್ಜ್ರತಿಕ ಕಾರ್ಯಕ್ರಮ, ಮೂರನೇ ದಿನ ಹಗಲು ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಭೆ, ಸಾಂಸ್ಕ್ರತಿಕ ಕಾರ್ಯಕ್ರಮ, ರಾತ್ರಿ ಸಿರಿಗಳ ಜಾತ್ರೆ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಸೇವಾ ಸಭಾ ಕಲಾಪಗಳನ್ನು ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಎರ್ಮೆನಾಡು ಸ್ವಾಗತಿಸಿ ವಂದಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ಮಾಟಕ
ಮೊ:9449104318