ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯಲ್ಲಿ ಎಪ್ರಿಲ್ 28, 29ರಂದು ಬ್ರಹ್ಮಕಲಶೋತ್ಸವ- ವಿಜ್ಞಾಪನಾ ಪತ್ರ ಬಿಡುಗಡೆ
ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯು ಜೀರ್ಣೋದ್ಧಾರಗೊಳ್ಳುತ್ತಿದ್ದು, ಎಪ್ರಿಲ್ 28 ಮತ್ತು 29ರಂದು ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಲಾಗಿದೆ.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಮಾಡಲಾದ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ ದೇವಸ್ಥಾನದಲ್ಲಿ ನಡೆಯಿತು.
ಆಡಳಿತ ಸಮಿತಿ ಗೌರವಾಧ್ಯಕ್ಷ ಮರಳೀಧರ ಕೆದಿಲಾಯ ಮಂಗಳೂರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸರ್ವರೂ ಕೈಜೋಡಿಸಬೇಕಾಗಿದೆ ಎಂದರು.
ಸಂದ್ಯಾ ಮುರಳೀಧರ ಕೆದಿಲಾಯ, ಆಡಳಿತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಡಿ ನರ್ವಲ್ದಡ್ಡ, ಕಾರ್ಯಾಧ್ಯಕ್ಷ ಜಿ.ಕೆ.ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ರಾಮಕೃಷ್ಣ ಎಸ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗ ಶೆಟ್ಟಿ ನರ್ವಲ್ದಡ್ಡ, ಅಧ್ಯಕ್ಷ ಬೂಬ ಸಪಲ್ಯ ಮುಂಡಬೈಲು, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಸೇವಾ, ಪತ್ರಕರ್ತ ಗೋಪಾಲ ಅಂಚನ್, ಸಮಿತಿ ಪ್ರಮುಖರಾದ ಸತೀಶ್ ಸಪಲ್ಯ ಮುಂಡಬೈಲು, ಗೋಪಾಲ ಶೆಟ್ಟಿ ನರ್ವಲ್ದಡ್ಡ, ಮಂಜುನಾಥ ಪೂಜಾರಿ ಮುಂಡಬೈಲು, ನಾಗೇಶ್ ಪೂಜಾರಿ ಮುಂಡಬೈಲು, ಹರೀಶ್ ನಾಯ್ಕ ಬಂಗೇರಕೆರೆ, ನಳಿನಿ ಪುರಂದರ ಪೂಜಾರಿ ಸೇವಾ, ಬೇಬಿ ರತ್ನಾಕರ ಗೌಡ ಕಜೆಕೋಡಿ, ಲೋಕನಾಥ ಶೆಟ್ಪಿ ನರ್ವಲ್ದಡ್ಡ ಮೊದಲಾದವರು ಉಪಸ್ಥಿತರಿದ್ದರು.
ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ಮಾಟಕ
ಮೊ:9449104318