ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಭಜನೋತ್ಸವಕ್ಕೆ ಚಾಲನೆ

ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ 48 ದಿನಗಳ ಕಾಲ ನಡೆಯುವ ಭಜನೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.


ಈ ದೇವಸ್ಥಾನವು ಜೀರ್ಣೋದ್ಧಾರಗೊಂಡು ಇದೇ ಎಫ್ರಿಲ್ ತಿಂಗಳ ಕೊನೆಯಲ್ಲಿ ಬಹ್ಮಕಲಶೋತ್ಸವ ನಡೆಯಲಿದ್ದು ಇದರಂಗವಾಗಿ 48 ದಿನಗಳ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಉದ್ಯಮಿ ಡಾ. ಟಿ.ವರದರಾಜ ಪೈ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಪ್ರಮುಖರಾದ ಯು.ಎಸ್.ಚಂದ್ರಶೇಖರ ಭಟ್, ಜಿ.ಕೆ. ಭಟ್ ವಾಮದಪದವು, ಡಾ.ಶಿವಪ್ರಸಾದ್ ಭಟ್ ನೇಸರ ಸನಂಗುಳಿ, ಡಾ.ರಾಮಚಂದ್ರ ಭಟ್ ಹೊಸಬೆಟ್ಟು, ದೇವಪ್ಪ ಶೆಟ್ಟಿ ಕುಂಟಜಾಲು, ಬಾಲಕೃಷ್ಣ ಪಾಂಗಣ್ಣಾಯ, ಗೋಪಾಲಕೃಷ್ಣ ಆಚಾರ್ಯ, ಶೇಖರ ಪೂಜಾರಿ ಅಗಲೋಡಿ, ಕೊರಗ ಶೆಟ್ಟಿ ನರ್ವಲ್ದಡ್ಡ, ಮೋನಪ್ಪ ಬಂಗೇರಾ ಪಾಲೆದಡಿ, ಬಾಬು ಶೆಟ್ಟಿ ಸೇವಾ, ದಯಾನಂದ ಎಸ್.ಎರ್ಮೆನಾಡು, ಗಣೇಶ್ ಶೆಟ್ಟಿ ಸೇವಾ, ಉಮೇಶ ಆಚಾರ್ಯ ಮಣ್ಣೂರು, ವೆಂಕಪ್ಪ ಮೂಲ್ಯ ಮುಂಡಬೈಲು, ಮೋನಪ್ಪ ಮೂಲ್ಯ ಮುಂಡಬೈಲು, ಶೀನ ಬಂಗೇರಾ ಮುಂಡಬೈಲು, ದಾಮೋದರ ಪೂಜಾರಿ ಮುಂಡಬೈಲು, ಮಂಜುನಾಥ ಪೂಜಾರಿ ಮುಂಡಬೈಲು, ಸೀತಾರಾಮ ಶೆಟ್ಟಿ ಸೇವಾ ಮೊದಲಾದವರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ಮಾಟಕ
ಮೊ:9449104318