ಕಾವಳಮೂಡೂರು-ಎನ್.ಸಿ.ರೋಡಿನಲ್ಲಿ ಅಪಾರ ಜನಸ್ತೋಮದೊಂದಿಗೆ ಯಶಸ್ವಿಯಾಗಿ ಸಮಾಪನಗೊಂಡ 5ನೇ ದಿನದ ಪ್ರಜಾಧ್ವನಿ ಯಾತ್ರೆ

ಬಿ.ರಮಾನಾಥ ರೈಯವರ ಹೆಸರು ರಾಜ್ಯ ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಜವಾಬ್ಧಾರಿ ಕಾರ್ಯಕರ್ತರ ಮೇಲಿದೆ-ಸುಧೀರ್ ಕುಮಾರ್ ಮರೋಳಿ

ಬಂಟ್ವಾಳ: ಐದನೇ ದಿನದ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯು ಕಾವಳಕಟ್ಟೆ, ಎನ್.ಸಿ.ರೋಡು ಪೇಟೆಯಲ್ಲಿ ಬುಧವಾರ ರಾತ್ರಿ ಅಪಾರ ಜನಸ್ತೋಮದೊಂದಿಗೆ ಯಶಸ್ವಿಯಾಗಿ ಸಮಾಪನಗೊಂಡಿತು.


ಬೆಳಿಗ್ಗೆ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭಗೊಂಡ ಯಾತ್ರೆಯು ನಾವೂರು, ಕಾವಳಪಡೂರು ಹಾಗೂ ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ, ಸಂಜೆ ವೇಳೆ ಕಾವಳಕಟ್ಟೆ, ಎನ್.ಸಿ.ರೋಡು ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ರೈ ಅಭಿಮಾನಿಗಳು ಪಾಲ್ಗೊಂಡು ಕಾಂಗ್ರೇಸ್ ಪಕ್ಷ ಹಾಗೂ ರಮಾನಾಥ ರೈಯವರ ಪರ ಘೋಷಣೆ ಕೂಗಿದರು.
ಕೆ.ಪಿ.ಸಿ.ಸಿ.ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿ ಬಿಜೆಪಿಯ ಜನವಿರೋಧಿ ಧೋರಣೆಗಳ ಬಗ್ಗೆ ವಾಗ್ದಾಳಿ ನಡೆಸಿದರು.

ರೈಯವರಿಗೆ ಮತಗಳಿಕೆಯೊಂದೇ ಉದ್ಧೇಶವಲ್ಲ, ಮನುಷ್ಯತ್ವವೇ ಮುಖ್ಯ:

ತನ್ನ ಬದುಕನ್ನೇ ಜನಸೇವೆಗಾಗಿ ಮುಡಿಪಾಗಿಟ್ಟ ರಮಾನಾಥ ರೈಯವರಿಗೆ ಮತಗಳಿಕೆಯೊಂದೇ ಉದ್ಧೇಶವಲ್ಲ, ಅವರಿಗೆ ಪ್ರೀತಿ ಮುಖ್ಯ, ಮನುಷ್ಯತ್ವ ಮುಖ್ಯ. ರೈಯವರು ಬಲುಬೇಗನೇ ಕೊನೆಯ ಚುನಾವಣೆಯನ್ನು ಘೋಷಿಸಿದ್ದಾರೆ. ಕೊನೆಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅವರಿಗೆ ಸೋಲಾಗಬಾರದು, ಅವರ ಸೋಲು ಪ್ರಾಮಾಣಿಕತೆಯ ಸೋಲು. ಅವರ ಗೆಲುವು ಜನರ ಗೆಲುವು, ಶಾಂತಿ-ಸಾಮರಸ್ಯದ ಗೆಲುವು. ಕೊನೆಯ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಮೂಲಕ ಅವರ ಹೆಸರು ರಾಜ್ಯರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಮಹತ್ತರವಾದ ಜವಾಬ್ಧಾರಿ ಕಾರ್ಯಕರ್ತರ ಮೇಲಿದೆ ಎಂದು ಸುಧೀರ್ ಕುಮಾರ್ ಮರೋಳಿ ಹೇಳಿದರು.


ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಕ್ಷೇತ್ರಕ್ಕೆ ಹರಿಸಿ ಬಂಟ್ವಾಳವನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ್ದ ಅಭಿವೃದ್ದಿಯ ಹರಿಕಾರ ರೈಯವರಿಗೆ ಜನರ ಪ್ರೀತಿ ಮುಖ್ಯ, ಕ್ಷೇತ್ರದ ಅಭಿವೃದ್ಧಿ ಮುಖ್ಯ. ಆದರೆ ಏನೇನೂ ಅಭಿವೃದ್ಧಿ ಮಾಡದ ಬಿಜೆಪಿಗರಿಗೆ ಜನರನ್ನು ವಿಭಜಿಸುವುದು ಮತ್ತು ಸುಳ್ಖು ಅಪಪ್ರಚಾರ ಮಾಡುವುದೇ ಮುಖ್ಯವಾಗಿದೆ. ಗೋಡ್ಸೆ ಸಂತತಿಗಳಿಗೆ ರಾಜಕೀಯದಲ್ಲಿ ಜಾತಿ-ಧರ್ಮ ವಿಭಜನೆಯ ವಿಷಯವಾದರೆ, ಗಾಂಧಿ ವಂಶಸ್ಥರಾದ ನಮಗೆ ಅಲ್ಲಾ ರಾಮ ಎಲ್ಲರೂ ಒಂದೇ. ಎಲ್ಲರೂ ಸೋದರರಂತೆ ಬದುಕುವ ಸಮಾಜ ನಿರ್ಮಾಣವೇ ನಮ್ಮ ಉದ್ಧೇಶವೆಂದರು.
ದೇವರ ವೃತ, ಪೂಜೆಯ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಅಲ್ಲೂ ದ್ವೇಷ ಭಾಷಣ ಮಾಡುವ ಬಿಜೆಪಿಗರಿಗೆ ಜನರ ಹಿತ ಕಾಯುವ ನೈತಿಕತೆಯೇ ಉಳಿದಿಲ್ಲ. ಜಾದೂ ರಾಜಕೀಯ, ಗಿಲೀಟು ರಾಜಕೀಯ ಮಾಡುವುದು ಬಿಟ್ಟರೆ ಬಿಜೆಪಿಗರು ಮಾಡಿದ್ದು ಬರೇ ಶೂನ್ಯವಾಗಿದೆ. ಅಭಿವೃದ್ಧಿ ವಿಷಯ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ರಾಜಕೀಯದಲ್ಲೂ ಮಕ್ಕಳಾಟಿಕೆ ಮೆರೆಯುವ, ಕೋಮುವಾದ ಭಾಷಣ ಮಾಡುವ ನಳಿನ್ ಅವರಂತವರಿಗೆ ರಮಾನಾಥ ರೈಗಳ ಅಭಿವೃದ್ದಿ ವಿಚಾರ ಎಲ್ಲಿ ಅರ್ಥ ಆಗುತ್ತದೆ ಎಂದು ಪ್ರಶ್ನಿಸಿದ ಸುಧೀರ್, ಕಾಂಗ್ರೆಸ್ ವಿಚಾರದ ತಳಹದಿಯಲ್ಲಿ ರಾಜಕಾರಣ ಮಾಡಿದರೆ ಬಿಜೆಪಿ ದ್ಚೇಷ-ಅಸೂಯೆ- ನಂಜಿನ ರಾಜಕೀಯ ಮಾಡುತ್ತಾ ಸಮಾಜವನ್ನು ಅದಃಪತನಕ್ಕಿಳಿಸುತ್ತಿದೆ ಎಂದರು.
ಜನರೇ ಕೈಗೊಳ್ಳುವ ಕೆಲಸಕ್ಕೆ ಮೋದಿ ಚಿತ್ರ ಹಾಕಿ ಬಿಜೆಪಿ ಕೇವಲ ಪ್ರಚಾರ ಪಡೆದುಕೊಂಡರೆ, ಕಾಂಗ್ರೆಸ್ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಪಾಯಿ ಸಹಾಯಧನ ಘೋಷಿಸುವ ಮೂಲಕ ಹೆಣ್ಣು ಮಕ್ಕಳಿಗೆ ಸ್ವಾಭಿಮಾನದ ಬದುಕು ಕಲ್ಪಿಸುತ್ತದೆ. ನುಡಿದಂತೆ ನಡೆಯುವ ಬದ್ದತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದ ಸುಧೀರ್, ಇದುವರೆಗೂ ಏನನ್ನೂ ಮಾಡದ ಬಿಜೆಪಿಗರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮನೆ ಬಾಗಿಲಿಗೆ ಬರತೊಡಗಿದ್ದಾರೆ, ನಿತ್ಯ ಬಳಕೆಯ ವಸ್ತುಗಳ ಸಹಿತ ಪೆಟ್ರೊಲು, ಗ್ಯಾಸಿನ ಬೆಲೆ ಏರಿಕೆಯ ಬಗ್ಗೆ ಅವರನ್ನು ಪ್ರಶ್ನಿಸಬೇಕಾಗಿದೆ, ಮನೆಯಿಂದ ಹೊರನಡೆಯಿರಿ ಎನ್ನಬೇಕಾಗಿದೆ ಎಂದರು.

*ಬಿಜೆಪಿಯವರದ್ದು ಭರವಸೆ ಮಾತ್ರ-ಕಾಂಗ್ರೆಸ್ಸಿದ್ದು ಬದ್ಧತೆ-ರೈ*

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಬಿಜೆಪಿಯವರು ಬಿಜೆಪಿಯೇ ಭರವಸೆ ಎಂಬ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಅದು ಈ ನಾಡಿನ ಬುದ್ದಿವಂತ ಜನರಿಗೆ ಅರ್ಥವಾಗುತ್ತದೆ. ಬಿಜೆಪಿಯವರದ್ದು ಕೇವಲ ಭರವಸೆ ಮಾತ್ರ, ಆದರೆ ಕಾಂಗ್ರೆಸ್ ಇದುವರೆಗೂ ನೀಡಿದ ಭರವಸೆಯನ್ನು ಈಡೇರಿಸಿದೆ, ಮುಂದೆಯೂ ಈಡೇರಿಸುತ್ತದೆ, ಆ ಬದ್ಧತೆ ಕಾಂಗ್ರೆಸ್ಸಿಗಿದೆ ಎಂದರು.
ಬಿಜೆಪಿಗರು ತಾವು ಹೇಗೆ ದುಡ್ಡನ್ನು ಬಾಚುವುದು ಎಂಬ ಚಿಂತೆಯಲ್ಲೇ ಕಾಲ ಕಳೆದರೆ ಕಾಂಗ್ರೆಸ್ ಬಡವರ ಏಳಿಗೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿ ಜನಪರ ರಾಜಕೀಯ ಮಾಡುತ್ತಿದೆ ಎಂದು ರೈ ಹೇಳಿದರು.
ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಜಿನರಾಜ್ ಅರಿಗ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಬಿ.ಎಂ. ಅಬ್ಬಾಲ್ ಅಲಿ, ಕೆ ಮಾಯಿಲಪ್ಪ ಸಾಲ್ಯಾನ್, ಕೆ. ಕೆ.ಶಾಹುಲ್ ಹಮೀದ್, ಸುದರ್ಶನ್ ಜೈನ್, ಸದಾಶಿವ ಬಂಗೇರ, ಅರ್ಶದ್ ಸರವು, ಸುರೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ವಿ ಕೋಟ್ಯಾನ್, ಚಂದ್ರಶೇಖರ ಕರ್ಣ, ಬಾಲಕೃಷ್ಣ ಅಂಚನ್, ಪಂಚಾಯತ್ ಅಧ್ಯಕ್ಷರಾದ ಯು. ಉಮೇಶ್ ಕುಲಾಲ್, ರಜನಿ ಮೂಲ್ಯ, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಸದಸ್ಯರಾದ ಸುವರ್ಣ ಕುಮಾರ್ ಜೈನ್, ಫಾರೂಕ್, ಯೋಗೀಶ್ ಬಂಗೇರಾ, ಲವೀನಾ ಶಾಂತಿ ಡಿಸೋಜ, ಮುಹಮ್ಮದ್ ಎಂ, ಸುರೇಶ್ ಪೂಜಾರಿ, ಅಬ್ದುಲ್ ರಝಾಕ್, ವೀರೇಂದ್ರ ಅಮೀನ್, ಲಕ್ಷ್ಮೀನಾರಾಯಣ, ಶರ್ಮ, ಪುಷ್ಪ, ಲೀನಾ ರೋಡ್ರಿಗಸ್, ಶೋಮಲ್ ಲೋಬೋ, ಅಬ್ದುಲ್ ಹನೀಫ್, ಉದಯ ಪೂಜಾರಿ, ಮುಸ್ತಫಾ, ಪ್ರಭಾಕರ್ ಅಮೀನ್, ಜನಾರ್ದನ, ಮಾಣಿಕ್ಯರಾಜ್, ತನ್ವೀರ್ ತಾಹಾ, ಅಬ್ದುಲ್ ಖಾದರ್ ಸಲಿ, ಮೊಹಮ್ಮದ್ ಶರೀಫ್, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ವಿಜಯ ಅಲ್ಲಿಪಾದೆ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಸ್ವಾಗತಿಸಿದರು. ರಾಜೀವ್ ಶೆಟ್ಟಿ ಎಡ್ತೂರು ಮೂರು ಪಂಚಾಯತ್ ವ್ಯಾಪ್ತಿಯಲ್ಲಿ ರಮಾನಾಥ ರೈ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318