ಬಿ.ರಮಾನಾಥ ರೈಯವರು ಎಲ್ಲಾ ಜಾತಿ,ಧರ್ಮದವರನ್ನು ಸಮಾನವಾಗಿ ಗೌರವಿಸುವ ಪರಿಶುದ್ಧ ನಾಯಕರು-ಈಶ್ವರ ಭಟ್

ಬಂಟ್ವಾಳ: ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಗೌರವಿಸುವ ಬಿ.ರಮಾನಾಥ ರೈಯವರು ನೇರ ನಡೆನುಡಿ, ಬಡವರ ಮೇಲಿನ ವಿಶೇಷ ಕಾಳಜಿ ಹಾಗೂ ಪ್ರಾಮಾಣಿಕ ಜನಸೇವೆಯ ಮೂಲಕ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಬಣ್ಣಿಸಿದ್ದಾರೆ.

ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಪಾಂಡವರಕಲ್ಲಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು ರಮಾನಾಥ ರೈ ಎಲ್ಲರನ್ನೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ, ಎಲ್ಲರ ಸೇವೆಯನ್ನೂ ಮಾಡುತ್ತಾರೆ. ಅವರಿಗೆ ಶಾಂತಿ ಬೇಕು, ಸೌಹಾರ್ದತೆ ಬೇಕು. ಆದರೆ ಬಿಜೆಪಿಯವರು ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತಿ ಅಶಾಂತಿ ಸೃಷ್ಠಿಸುತ್ತಾರೆ. ಯುವಕರನ್ನು ಹಾದಿ ತಪ್ಪಿಸುತ್ತಾ ಬಡವರ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಸಮಾರೋಪಾದಿಯಲ್ಲಿ ನಡೆಯಬೇಕಾಗಿದೆ ಎಂದರು.

ದೇಶದಲ್ಲಿ ಅಭಿವೃದ್ಧಿಯ ಬದಲು ಎಲ್ಲವನ್ನೂ ಖಾಸಗಿ ಯವರಿಗೆ ಮಾರಾಟ ಮಾಡುತ್ತಿರುವ ಬಿಜೆಪಿಯವರಿಗೆ ಕೋಮು ಭಾವನೆಯನ್ನು ಕೆರಳಿಸುವುದೇ ಮುಂದಿನ ಚುನಾವಣೆಗೆ ಪ್ರಧಾನ ಅಸ್ತ್ರವಾಗಲಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ಅಪಪ್ರಚಾರ, ನಕಲಿ ಹಿಂದುತ್ವ, ಗೋಮಾತೆ, ಶವ ರಾಜಕೀಯ, ಲವ್ ಜಿಹಾದ್, ಇತ್ಯಾದಿಗಳ ಮೂಲಕ ಮುಂಬರುವ ಚುನಾವಣೆಯನ್ನು ಗೆಲ್ಲಲು ಷಡ್ಯಂತ್ರ ರೂಪಿಸಿದ್ದಾರೆ ಎಂದ ಈಶ್ವರ ಭಟ್ ಬಿಜೆಪಿಯವರಿಗೆ ತಾಕತ್ತಿದ್ದರೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಮಾಡಿದಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಿ ತೋರಿಸಲಿ ಎಂದು ಸವಾಲೆಸೆದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ವೈಯುಕ್ತಿಕವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸುದೀರ್ಘ ರಾಜಕೀಯ ಮಾಡಿದ್ದೇನೆ. ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ಕ್ಷೇತ್ರದ ಜನ ಹಾಗೂ ಈ ರಾಜ್ಯದ ಜನರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ಇದನ್ನು ಜನ ಅರ್ಥ ಮಾಡಿಕೊಂಡು ಈ ಬಾರಿಯ ನನ್ನ ಕೊನೆಯ ಚುಣಾವಣೆಯಲ್ಲಿ ಮತ್ತೊಮ್ಮೆ ಆರಿಸಿ ಕಳುಹಿಸದಲ್ಲಿ ಕಳೆದ ಬಾರಿ ಮಾಡಿದ್ದಕ್ಕಿಂತ ದುಪ್ಪಟ್ಟು ಅನುದಾನ ತಂದು ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ ಎಂದರು.

 ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸದಾಶಿವ ಬಂಗೇರ, ರಾಜೀವ್ ಶೆಟ್ಟಿ ಎಡ್ತೂರು, ಬಿ ಎಂ ಅಬ್ಬಾಸ್ ಅಲಿ, ಪಿ ಎ ರಹೀಂ, ಪ್ರವೀಣ್ ರೋಡ್ರಿಗಸ್, ಸತೀಶ್ಚಂದ್ರ ಹೊಸಮನೆ, ಬಿ ಅಬ್ದುಲ್ಲ, ಜಯ ಬಂಗೇರ, ಸುಧಾಕರ್ ಶೆಣೈ ಖಂಡಿಗ, ಅಸ್ಮಾ ಅಝೀಝ್, ಬಾಲಾಜಿ ರಾವ್, ಪ್ರಶಾಂತ್ ಜೈನ್, ರಕ್ಷಿತಾ, ಮೋಹಿನಿ, ಜೋನ್ ಸಿಕ್ಷೇರಾ, ವಸಂತ ಮಿತ್ತೋಟು, ಮೋಹನ್ ಸಾಲ್ಯಾನ್, ಸುಧೀರ್ ಶೆಟ್ಟಿ, ಪ್ರಶಾಂತ್ ಕೋಟ್ಯಾನ್, ನೆಲ್ವಿಸ್ಟರ್ ಪಿಂಟೋ, ಸುಚಿತ್ರ ಶೆಟ್ಟಿ, ಲವೀನಾ ಮೊರಾಸ್, ಎಸ್ ಪಿ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದರು.

ಡೀಕಯ ಬಂಗೇರ ಸ್ವಾಗತಿಸಿ, ಮಾಣಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318