ಕರ್ಪೆ ಗ್ರಾಮದಲ್ಲಿ 8.34 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ರಸ್ತೆಗಳ ,ಉದ್ಘಾಟನೆ-ಕ್ಷೇತ್ರದಲ್ಲಿ ದಾಖಲೆ ಪ್ರಮಾಣದ ಅಭಿವೃದ್ಧಿ-ರಾಜೇಶ್ ನಾಯ್ಕ್

ಬಂಟ್ವಾಳ: ಕರ್ಪೆ ಗ್ರಾಮದ ಜನತೆಯ ಬೇಡಿಕೆಗನುಗುಣವಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಈ ಗ್ರಾಮದಲ್ಲಿ ನಡೆಸಲಾಗುವುದು. ತನ್ನ ಕರ್ತವ್ಯವೆಂದು ಪರಿಗಣಿಸಿ ಬಂಟ್ವಾಳ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ನಡೆಸಲಾಗಿದೆ. ತನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರವು ಯಾವುದೇ ಗಲಭೆ, ಗೊಂದಲ್ಲಗಳಿಲ್ಲದೆ ಶಾಂತಿಯ ನೆಲೆಬೀಡಾಗಿ ಪರಿವರ್ತನೆಗೊಂಡಿರುವುದು ನನಗೆ ಆತ್ಮತೃಪ್ತಿ ತಂದಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದಲ್ಲಿ 8.34 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿಯವರ ದೂರದರ್ಶಿತ್ವದ ಚಿಂತನೆಯ ಫಲವಾಗಿ ಜನ್ ಧನ್ ಮೂಲಕ ಅದೆಷ್ಟೋ ಫಲಾನುಭವಿಗಳಿಗೆ ಸವಲತ್ತುಗಳು ನೇರವಾಗಿ ತಲುಪುತ್ತಿದೆ. ಇಡೀ ಜಗತ್ತು ಮೋದಿಯವರನ್ನು ನಾಯಕನನ್ನಾಗಿ ಒಪ್ಪಿದ್ದು ವಿರೋಧಿಗಳೂ ಮೆಚ್ಚುವ ನಾಯಕರಾಗಿ ಮಿಂಚುತ್ತಿದ್ದಾರೆ. ಅತೀ ಹೆಚ್ಚು ಸದಸ್ಯ ಬಲವನ್ನು ಹೊಂದಿರುವ ಬಿಜೆಪಿ ಎತ್ತರದ ಸ್ಥಾನದಲ್ಲಿದ್ದು ಬಿಜೆಪಿಯ ಸದಸ್ಯರೆನ್ನುವುದು ನಮಗೆ ಹೆಮ್ಮೆಯಾಗಬೇಕಾಗಿದೆ ಎಂದು ರಾಜೇಶ್ ನಾಯ್ಕ್ ಹೇಳಿದರು.

ತಾಲೂಕು ಪಂಚಾಯತು ಮಾಜಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಕರ್ಪೆ ಗ್ರಾಮದಲ್ಲಿ ಅಭೂತಪೂರ್ವವಾದ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿದೆ. ಕರ್ಪೆ ಗ್ರಾಮದ ಜನತೆಯ ಬೇಡಿಕೆಗಳನ್ನು ಈಡೇರಿಸಿದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಸಂಗಬೆಟ್ಟು ಗ್ರಾಮ ಪಂಚಾಯತು ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಉಪಾಧ್ಯಕ್ಷೆ ವಿಮಲಾಮೋಹನ್, ಪಕ್ಷದ ಪ್ರಮುಖರಾದ ರತ್ನಕುಮಾರ್ ಚೌಟ, ನಾರಾಯಣ ನಾಯಕ್ ಕರ್ಪೆ, ಮಂದಾರತಿ ಶೆಟ್ಟಿ, ನವೀನ್, ತೇಜಸ್, ಸುನೀಲ್ ಶೆಟ್ಟಿಗಾರ್, ಸುರೇಶ್ ಕುಮಾರ್, ಉದಯ ಪೂಜಾರಿ, ಉಮೇಶ ಗೌಡ, ದೀಪಕ್ ಶೆಟ್ಟಿ, ಸಂದೇಶ್ ಶೆಟ್ಟಿ ಪೊಡುಂಬ, ದಾಮೋದರ ಪೂಜಾರಿ, ನೀಲಕಂಠ ಭಟ್, ಲೋಕಯ ಪೂಜಾರಿ, ಚಂದ್ರಶೇಖರ ಪೂವಳ, ರಾಜೇಂದ್ರ ನೆಕ್ಲಾಜೆ, ವಿನಯ ಕುಮಾರ್ ಜೈನ್, ಹರೀಶ್ ಪೂಜಾರಿ ಶೆಟ್ಟಿಬೆಟ್ಟು, ಯೋಗೀಶ್ ಪೂಜಾರಿ, ಸುಂದರ ಪೂಜಾರಿ, ರಾಮಕೃಷ್ಣ ನಾಯಕ್, ಭಾಸ್ಕರ ಪ್ರಭು, ವಸಂತ ಶೆಟ್ಟಿ, ಹರೀಶ್ ತಾರಾಬರಿ, ದಾಮೋದರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು: ಯುವಧ್ವನಿ ನ್ಯೂಸ್ ಕರ್ನಾಟಕ. ಮೊ:9449104318