ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಫುಟ್ಬಾಲ್ ತಂಡ ಇಲ್ಲದಿರುವುದು ಖೇದಕರ: ರಿಯಾಝ್ ಫರಂಗಿಪೇಟೆ

ಬಂಟ್ವಾಳ: ಫುಟ್ಬಾಲ್ ಎಂಬುವುದು ಭಾರತ ದೇಶದ ಗಲ್ಲಿ ಗಲ್ಲಿಗಳಲ್ಲಿ ಜನಪ್ರಿಯ ಕ್ರೀಡೆಯಾಗಿ ಗುರುತಿಸುತ್ತಿದೆ. ಆದರೆ ಸುಮಾರು 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಒಂದು ಪುಟ್ಬಾಲ್ ತಂಡವಿಲ್ಲದಿರುವುದು ಖೇದಕರ ಎಂದು ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.

ಅಬ್ದುಲ್ ರೆಹಮಾನ್ ನೇತೃತ್ವದಲ್ಲಿ ಎಸ್ಡಿಪಿಐ ತಲಪಾಡಿ ಆಯೋಜಿಸಿದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾ ಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಟಗಾರರಿಗೆ ತರಬೇತಿಯ ಹಾಗೂ ಸೌಲಭ್ಯಗಳ ಕೊರತೆ, ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದರು. ಉದ್ಯಮಿ ಮೊಹಮ್ಮದ್ ಕುಂಞ, ಎಸ್ಡಿಪಿಐ ಮಂಜೇಶ್ವರ ಮಂಡಲ ಅಧ್ಯಕ್ಷ ಆಶ್ರಫ್ ಬಡಾಜೆ, ಉಳ್ಳಾಲ ಫುಟ್ಬಾಲ್ ಅಸೋಸಿಯೇಷನ್ ತರಬೇತುದಾರ ಸಾಜಿದ್ ಉಳ್ಳಾಲ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಹಮೀದ್ ಹೊಸಂಗಡಿ, ಮುಸ್ಲಿಂ ಒಕ್ಕೂಟ ಉಳ್ಳಾಲ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ್, ಎಸ್ಡಿಪಿಐ ಮುಖಂಡರಾದ ಇಮ್ತಿಯಾಜ್ ಉಳ್ಳಾಲ್, ಶಾಹೀದ್ ಕಿನ್ಯ, ಸಬೀಲ್ ಉಳ್ಳಾಲ್, ಶಕೀಲ್ ಕೆ. ಸಿ ರೋಡ್ ಉಪಸ್ಥಿತರಿದ್ದರು
ಯುನೈಟೆಡ್ ಉಚ್ಚಿಲ ಚಾಂಪಿಯನ್ ಆಗಿ ಮೆರೆದರೆ ನ್ಯೂ ಸ್ಟಾರ್ ಕುಂಜತ್ತೂರು ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ವರದಿ:ಗೋಪಾಲ ಅಂಚನ್ ಸಂಪಾದಕರು: ಯುವಧ್ವನಿ ನ್ಯೂಸ್ ಕರ್ನಾಟಕ. ಮೊ:9449104318