ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ “ಪರೀಕ್ಷಾ ಪೂರ್ವ ಸಿದ್ಧತೆ” ತರಬೇತಿ ಕಾರ್ಯಾಗಾರ

ಬಂಟ್ವಾಳ: ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಬಂಟ್ವಾಳ ರೋಟರಿ ಕ್ಲಬ್, ಇಂಟರಾಕ್ಟ್ ಕ್ಲಬ್ ಮತ್ತು ಜೆಸಿಐ ಮಂಗಳೂರು ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ “ಪರೀಕ್ಷಾ ಪೂರ್ವ ಸಿದ್ಧತೆ” ತರಬೇತಿ ಕಾರ್ಯಾಗಾರ ನಡೆಯಿತು.


ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ಪರೀಕ್ಷೆಯ ಬಗೆಗಿನ ಭಯ, ಚಿಂತೆ, ಗೊಂದಲದಿಂದ ಹೊರಬಂದು ಆತ್ಮವಿಶ್ವಾಸ ಮತ್ತು ಆಸಕ್ತಿಯಿಂದ ಓದಬೇಕು. ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದರೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು. ಹಿರಿಯ ಶಿಕ್ಷಕರಾದ ಎಂ.ಕೆ.ಬಾಲಕೃಷ್ಣ, ಐ.ಜಯಲಕ್ಷ್ಮಿ, ಎಸ್. ಚೆನ್ನಪ್ಪ ಗೌಡ, ಗಂಗಾಧರ ಗೌಡ, ಶ್ಯಾಮಲ ಕೆ., ಸುಷ್ಮಿತ ಉಪಸ್ಥಿತರಿದ್ದರು. ಯಕ್ಷಲೋಕ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ನಿರ್ದೇಶಕರಾದ ಗೋಪಾಲ ಅಂಚನ್ ಮತ್ತು ಪ್ರತಿಮಾ ಗೋಪಾಲ ಅಂಚನ್ ಆಲದಪದವು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ಕಾರ್ಯಾಗಾರ ನಡೆಸಿದರು. ಹಿಂದಿ ಶಿಕ್ಷಕ ಜಯರಾಮ ಕಾಂಚನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ.ಕೆ. ಭಂಡಾರಿ ವಂದಿಸಿದರು.