ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಫೆ.8ರಿಂದ ಫೆ.10ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

ವಾಮದಪದವು: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನವು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಇದೀಗ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು ವ್ಯಾಪಕ ಸಿದ್ಧತೆ ನಡೆಯುತ್ತಿದೆ.

ಫೆಬ್ರವರಿ 8ರಿಂದ 10ರತನಕ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಕಾಡಬೆಟ್ಟು ನಾರಾಯಣ ಶಿಬರಾಯರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ವೈಧಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಫೆ.8ರಂದು ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು, ಅಪರಾಹ್ನ 3ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ, ತುಳು ನಾಟಕ, ಫೆ.9ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಶ್ರೀ ರಾಘವೇಂದ್ರ ಗುರುಗಳ ಬಿಂಬ ಪ್ರತಿಷ್ಠಾಪನೆ, ಪರಿವಾರ ದೈವಗಳ ಪ್ರತಿಷ್ಠೆ, ಧಾರ್ಮಿಕ ಸಭೆ, ಸಂಜೆ ಯಕ್ಷಗಾನ ಬಯಲಾಟ, ಫೆ.10ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಗಾಯತ್ರಿ ಯಾಗ, ಧಾರ್ಮಿಕ ಸಭೆ, ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ ರಂಗಪೂಜೆ, ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಪ್ರತಿದಿನ ವಿವಿಧ ವೈಧಿಕ ಕಾರ್ಯಕ್ರಮಗಳು,ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಕೆ.ಎಸ್.ಪಂಡಿತ್ ಆಡಳಿತ ಧರ್ಮದರ್ಶಿ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಶ್ರೀನಿವಾಸ ಪಿ.ಸಪಲ್ಯ ಮುಂಬೈ ಗೌರವಾಧ್ಯಕ್ಷರು, ಎಂ.ತುಂಗಪ್ಪ ಬಂಗೇರಾ ಅಧ್ಯಕ್ಷರು, ಮೋಹನ್ ಕೆ.ಶ್ರೀಯಾನ್ ರಾಯಿ ಪ್ರಧಾನ ಕಾರ್ಯದರ್ಶಿ, ಅಭಿಷೇಕ್ ಪಿಲಿಂಗಾಲು ಕೋಶಾಧಿಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿ, ಪ್ರಕಾಶ್ ಉಡುಪ ಬೆಂಗಳೂರು ಮತ್ತು ಎ.ಕೆ.ಸುಂದರ ಸಾಲ್ಯಾನ್ ಬೆಂಗಳೂರು ಗೌರವಾಧ್ಯಕ್ಷರು, ಬಿ.ರಘ ಸಪಲ್ಯ ಪಾಣೆಮಂಗಳೂರು ಅಧ್ಯಕ್ಷರು, ನಾಗೇಶ್ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿ, ಹರೀಶ್ ಪಿಲಿಂಗಾಲು ಕೋಶಾಧಿಕಾರಿಯಾಗಿರುವ ಜೀರ್ಣೋದ್ಧಾರ ಸಮಿತಿ, ಬಿ.ಪದ್ಮಶೇಖರ ಜೈನ್ ಬಲ್ಲೋಡಿಗುತ್ತು ಅಧ್ಯಕ್ಷತೆಯ ಸ್ವಾಗತ ಸಮಿತಿ, ಮಾಧವ ಎಸ್.ಮಾವೆ ಸಾಲೆತ್ತೂರು ಅಧ್ಯಕ್ಷತೆಯ ಆರ್ಥಿಕ ಸಮಿತಿ, ವೀರೇಂದ್ರ ಅಮೀನ್ ವಗ್ಗ ಅಧ್ಯಕ್ಷತೆಯ ಹೊರೆಕಾಣಿಕೆ ಸಮಿತಿ, ಪಧಾಧಿಕಾರಿಗಳು ಹಾಗೂ ವಿವಿಧ ಉಪಸಮಿತಿಗಳು ಬ್ರಹ್ಮಕಲಶೋತ್ಸವದ ಯಶಸ್ವಿಯಲ್ಲಿ ತೊಡಗಿಸಿಕೊಂಡಿದೆ.

ವರದಿ:ಗೋಪಾಲ ಅಂಚನ್ ಸಂಪಾದಕರು: ಯುವಧ್ವನಿ ನ್ಯೂಸ್ ಕರ್ನಾಟಕ. ಮೊ: 9449104318