ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಾಂಗಲ್ಪಾಡಿ, ಫೆ 6ರಿಂದ 8 ರವರೆಗೆ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ

ವಾಮದಪದವು: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.6ರಿಂದ 8ರವರೆಗೆ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಫೆ.6ರಂದು ಬೆಳಿಗ್ಗೆ 9.30ಕ್ಕೆ 45ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಪಡುಸವಾರಿ, ಸಂಜೆ 7ಕ್ಕೆ ದುರ್ಗಾ ನೃತ್ಯಾಲಯ ಮಂಜೇಶ್ವರ ಇವರಿಂದ ನಾಟ್ಯ ವೈಭವ, ಮೇಲ್ಪೆತ್ತರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಯಕ್ಷ ಅಂಚನ್ ಮತ್ತು ತಂಡದವರಿಂದ ಸಾಂಸ್ಕ್ರತಿಕ ಸಿಂಚನ, ಶ್ರೀ ದುರ್ಗಾಪರಮೇಶ್ವರೀ ಯಕ್ಷಮಿತ್ರ ಬಳಗ ಪದವು ಇವರಿಂದ ನೃತ್ಯ ಗುರು ನರಸಿಂಹ ಮಯ್ಯ ಅಲೆತ್ತೂರು ನಿರ್ದೇಶನದಲ್ಲಿ ಶಿವ ಪಂಚಾಕ್ಷರಿ ಮಹಿಮೆ ಎಂಬ ಯಕ್ಷಗಾನ ನಡೆಯಲಿದೆ.

ಫೆ.7ರಂದು ಬೆಳಿಗ್ಗೆ 11ಕ್ಕೆ ದರ್ಶನೋತ್ಸವ, ಬಟ್ಟಲು ಕಾಣಿಕೆ, ಸಂಜೆ ಮೂಡುಸವಾರಿ, ಶ್ರೀನಿವಾಸನಗರ ಮತ್ತು ಕೊರಗಟ್ಟೆ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ-ಕುಡ್ಲ ಅಭಿನಯದ ರಾಘವೇಂದ್ರ ಕಾರಂತ ಮೊಗರ್ನಾಡು ರಚನೆ, ನಿರ್ದೇಶನದ ಪರಿಮಳ ಕಾಲನಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.8ರಂದು ಬೆಳಿಗ್ಗೆ ವಿಷ್ಣುಯಾಗ, ತುಲಾಭಾರ ಸೇವೆ, ಸಂಜೆ ಮೂಡುಪಡುಕೋಡಿ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಧಾರ್ಮಿಕ ಸಭೆ-ವಿಷ್ಣುಪ್ರಸಾದ ಪ್ರಶಸ್ತಿ ಪ್ರದಾನ-ಪ್ರತಿಭಾ ಪುರಸ್ಕಾರ, ದೇವರ ಮಹೋತ್ಸವ, ದೈವಗಳ ಗಗ್ಗರ ಸೇವೆ, ಓಕುಳಿ ಉತ್ಸವ, ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ-ಇರ್ವತ್ತೂರು ಅಭಿನಯದ, ಗೋಪಾಲ ಅಂಚನ್ ರಚನೆ, ನಿರ್ದೇಶನದ “ಒರ್ಯೊರಿ ಒಂಜೊಂಜಿ ತರ” ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ವಿವಿಧ ವೈಧಿಕ ಕಾರ್ಯಕ್ರಮಗಳು, ಭಜನಾ ತಂಡಗಳಿಂದ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಗೋಪಾಲ ಅಂಚನ್ ಸಂಪಾದಕರು: ಯುವಧ್ವನಿ ನ್ಯೂಸ್, ಕರ್ನಾಟಕ. ಮೊ:9449104318