ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜಾತ್ರೋತ್ಸವ-ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ, ಇರ್ವತ್ತೂರು ಇದರ ಮಹಿಳಾ ಸದಸ್ಯರಿಂದ ಒರ್ಯೊರಿ ಒಂಜೊಂಜಿ ತರ…ತುಳು ನಾಟಕ ಪ್ರದರ್ಶನ

ಬಂಟ್ವಾಳ: ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಫೆಬ್ರವರಿ 8, ಬುಧವಾರದಂದು ರಾತ್ರಿ 9 ಗಂಟೆಗೆ ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ-ಇರ್ವತ್ತೂರು ಇದರ ಸದಸ್ಯರಿಂದ ಗೋಪಾಲ ಅಂಚನ್ ಆಲದಪದವು ರಚಿಸಿ ನಿರ್ದೇಶಿಸಿರುವ

ಒರ್ಯೊರಿ ಒಂಜೊಂಜಿ ತರ..!!!

ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮಹಿಳಾ ಮಂಡಳಿಯ ಸದಸ್ಯರಾದ ಶಶಿಕಲಾ ಎಲ್.ಉಡುಪ ಕೈಮಾರು, ಸಂಧ್ಯಾ ರಾಮಕೃಷ್ಣ ಕೋರ್ನಾಯ ಸನಂಗುಳಿ, ಜಯಶ್ರೀ ಲಕ್ಷ್ಮಣ ಪೂಜಾರಿ ಕಲಾಬಾಗಿಲು, ಪ್ರತಿಮ ಗೋಪಾಲ ಅಂಚನ್ ಆಲದಪದವು, ವಿಜಯ ಮಹೇಶ್ ಶೆಟ್ಟಿ ಇರ್ವತ್ತೂರು, ಸುಮ ಚಂದ್ರಶೇಖರ ಕಜೆಕೋಡಿ, ಸರಿತಾ ರಮಾನಂದ ಮೂರ್ಜೆಗುತ್ತು, ಸೌಮ್ಯ ನಾಯಕ್ ಪರಾರಿ ವಾಮದಪದವು, ಸುನೀತ ಆನಂದ ಇರ್ವತ್ತೂರು, ಗೀತಾ ಹರೀಶ್ ಎರ್ಮೆನಾಡು, ವಿದ್ಯಾ ಪ್ರಭು ವಾಮದಪದವು, ರೇವತಿ ನೋಣಯ್ಯ ನಾಯ್ಕ್ ಕಜೆಕೋಡಿ, ಗುಲಾಬಿ ಗಿರೀಶ್ ಪಾಂಗಲ್ಪಾಡಿ, ಪವಿತ್ರ ಶೆಣೈ ವಾಮದಪದವು ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸಲಿದ್ದಾರೆ. ಸತೀಶ್ ಪೂಂಜ, ವಾಮದಪದವು ಅವರ ಸಂಗೀತ, ಯಕ್ಷ ಪಿ.ಜಿ.ಅಂಚನ್ ಆಲದಪದವು ಅವರ ಹಿನ್ನೆಲೆಗಾಯನ, ಶ್ರುತಿ ಆರ್ಟ್ಸ್ ಕಾವಳಕಟ್ಟೆ ಅವರ ರಂಗಾಲಂಕರ, ಇಂದ್ರ ಸೌಂಡ್ಸ್ ವಾಮದಪದವು ಅವರ ಧ್ವನಿ ಮತ್ತು ಬೆಳಕಿನ ಸಂಯೋಜನೆ ಇದೆ. ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ-ಇರ್ವತ್ತೂರು ಇವರು ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಬಯಸಿದ್ದಾರೆ.

ವರದಿ: ಗೋಪಾಲ ಅಂಚನ್ ಸಂಪಾದಕರು: ಯುವಧ್ವನಿ ನ್ಯೂಸ್,ಕರ್ನಾಟಕ. ಮೊ:9449104318