ಪತ್ರಕರ್ತ ಗೋಪಾಲ ಅಂಚನ್ ಅವರ “ಸಭಾ ನಿರ್ವಹಣೆ ಹೇಗಿರಬೇಕು?.-ಕೃತಿ ಬಿಡುಗಡೆ”

ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನ ಪ್ರಕಟಿಸಿದ, ಪತ್ರಕರ್ತ ಗೋಪಾಲ ಅಂಚನ್ ಅವರ “ಸಭಾ ನಿರ್ವಹಣೆ ಹೇಗಿರಬೇಕು?” ಕೃತಿ ಭಾನುವಾರ ಬಿಡುಗಡೆಗೊಂಡಿದೆ.
ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ನಡೆದ ೬ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ನೂತನ ಕೃತಿಯನ್ನು ಮೂಡಬಿದ್ರೆ ಜೈನಮಠದ ಚಾರುಕೀರ್ತಿ
ಪಂಡಿತಾಚಾರ್ಯವರ್ಯ ಮಹಾ ಸ್ವಾಮಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಿಡುಗಡೆಗೊಳಿಸಿದರು.

ಮಾರ್ಗದರ್ಶಿ ಕೃತಿಯಿದು:

ಕಾರ್ಯಕ್ರಮ ನಿರೂಪಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಕೃತಿ ಮಾರ್ಗದರ್ಶಿಯಾಗಿದ್ದು ಸಭಾ ನಿರೂಪಕರೆಂದರೆ ಯಾರು? ನಿರೂಪಕರ ಜವಾಬ್ಧಾರಿಗಳೇನು?
ನಿರೂಪಕರಿಗೂ ಇತಿಮಿತಿ ಬೇಡವೇ? ನಿರೂಪಕರ ಕೌಶಲ್ಯಗಳು ಯಾವುದು? ನಿರೂಪಕರ ಪೂರ್ವ ಸಿದ್ಧತೆಗಳೇನು? ಯಾರು ನಿರ್ವಹಣೆ ಮಾಡಬಹುದು? ಇತ್ಯಾದಿ ಅಂಶಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ ಎಂದು ಕೃತಿಕಾರ ಗೋಪಾಲ ಅಂಚನ್ ಪ್ರತಿಕ್ರಿಯಿಸಿದ್ದಾರೆ.

ಹೊಸ ಸಂಚಲನ ಸೃಷ್ಠಿಸಲಿದೆ:

ಸಭಾ ಸಂಘಟನೆ, ಭಾಷಣ ಕಲೆ, ಸಭಾ ನಿರ್ವಹಣೆಯ ಬಗ್ಗೆ ಹಲವು ವರ್ಷಗಳಿಂದ ತರಬೇತಿ ಕಾರ್ಯಾಗಾರಗಳನ್ನು ನಡೆಸಿಕೊಂಡು ಬಂದಿರುವ ಪತ್ರಕರ್ತ ಗೋಪಾಲ ಅಂಚನ್ ಅವರ ಈ ಕೃತಿ ಸಭಾ ನಿರ್ವಹಣೆ- ನಿರೂಪಕರ ವಲಯದಲ್ಲೊಂದು ಹೊಸ ಸಂಚಲನ ಸೃಷ್ಠಿಸಲಿದೆ ಎಂದು ಕೃತಿಯನ್ನು ಪ್ರಕಟಿಸಿರುವ ಅಕ್ಷರ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಕೃತಿಯ ಬೆನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

ನಿರೂಪಣಾ ಕ್ಷೇತ್ರದ ಜ್ಞಾನದೀವಿಗೆ-ಎಚ್ಕೆ.

ಪ್ರಸ್ತುತ ಕಾಲಘಟ್ಟದಲ್ಲಿ ಹೊಸ ನಿರೂಪಕರಿಗೆ ಈ ಕೃತಿಯಲ್ಲಿನ ಪರಿಕಲ್ಪನೆ ತುಂಬಾ ಪ್ರಸ್ತುತವಾದುದು. ಈ ಕೃತಿ ನಿರೂಪಣಾ ಕ್ಷೇತ್ರಕ್ಕೊಂದು ಜ್ಞಾನದೀವಿಗೆಯಾಗಿದೆ. ನಿರೂಪಣೆಯ ಸಿದ್ಧತೆ-ಬದ್ಧತೆಗೆ ಪಾಠವಾಗಿದೆ ಎಂದು ರಂಗಕಲಾವಿದ, ಕಾರ್ಯಕ್ರಮ ನಿರೂಪಕ ಎಚ್ಕೆ.ನಯನಾಡು, ಕೃತಿಯ ಮುನ್ನುಡಿಯಲ್ಲಿ ಅಭಿಪ್ರಾಯಿಸಿದ್ದಾರೆ.

ಶ್ರೀ ಶಾರದಾ ತಿಲಕ ಪ್ರಶಸ್ತಿ ಪುರಸ್ಕ್ರತರಾದ ಶಾರದಾ ಎಸ್.ರಾವ್ ಮಂಚಿ, ದಾಮೋದರ ರಾವ್ ಸಂಗಬೆಟ್ಟು, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ, ನ್ಯಾಯವಾದಿ ಸುರೇಶ್ ಶೆಟ್ಟಿ, ಉದ್ಯಮಿ ವರದರಾಜ್ ಪೈ, ಯಕ್ಷ ವಾಸ್ಯಂ ಸಂಚಾಲಕಿ ಸಾಯಿಸುಮ ನಾವಡ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್. ಐ ಸುತೇಶ್, ಮೂಡುಪಡುಕೋಡಿ ಶಾಲಾ ಮುಖ್ಯ ಶಿಕ್ಷಕಿ ಐರಿನ್ ಮೀರಾಂದ, ವಿದ್ಯುತ್ ಗುತ್ತಿಗೆದಾರ ಜಗನ್ನಾಥ ಪೂಜಾರಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಕಯ್ಯಾಬೆ, ಶ್ರೀ ಶಾರದೋತ್ಸವ ಸೇವಾ ಸಮಿತಿ ಮತ್ತು ಅಕ್ಷರ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಸಮಿತಿ ಗೌರವಾಧ್ಯಕ್ಷ ರಾಜೀವ ಶೆಟ್ಟಿ ಇರ್ವತ್ತೂರು, ಕಾರ್ಯಾಧ್ಯಕ್ಷ ಹರೀಂದ್ರ ಪೈ, ಸಮಿತಿ ಪ್ರಮುಖರಾದ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶೇಖರ ಪೂಜಾರಿ ಅಗಲ್ದೋಡಿ, ಶಂಕರ ಶೆಟ್ಟಿ ಬೆದ್ರ್ ಮಾರ್, ದಯಾನಂದ ಎಸ್.ಎರ್ಮೆನಾಡು, ಗಣೇಶ್ ಶೆಟ್ಟಿ ಸೇವಾ, ಸತೀಶ್ ಕರ್ಕೇರಾ ಕಯ್ಯಾಬೆ ಮೊದಲಾದವರು ಕೃತಿ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.