ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ: 293.14 ಕೋಟಿ ರೂ.ವ್ಯವಹಾರ, ಸದಸ್ಯರಿಗೆ ಶೇ.12 ಡಿವಿಡೆಂಟ್ ಘೋಷಣೆ

ಯುವಧ್ವನಿ ನ್ಯೂಸ್

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು 2021-22 ನೇ ಸಾಲಿನಲ್ಲಿ 293.14 ಕೋಟಿ ವ್ಯವಹಾರ ನಡೆಸಿದ್ದು, 1.09 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ 12 ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.
ಸಂಘದ 2021-22 ನೇ ಸಾಲಿನ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಸಂಘದ ಠೇವಣಿಯನ್ನು 39.49 ಕೋ.ರೂ.ಗೆ ಹೆಚ್ಚಿಸಲಾಗಿದ್ದು, 62.86 ಕೋ.ರೂ. ಸಾಲ ಹೊರಬಾಕಿ ಇರುತ್ತದೆ, ಹೂಡಿಕೆ 6.27 ಕೋ.ರೂ.ನಿಂದ 9.49 ಕೋ.ರೂ.ಗೆ ಏರಿಕೆ ಕಂಡಿದ್ದು, ದುಡಿಯುವ ಬಂಡವಾಳ 48.68 ಕೋ.ರೂ.ನಿಂದ 77.92 ಕೋ.ರೂ.ಗೆ ಏರಿಕೆಯಾಗಿದೆ ಎಂದು ವಿವರಿಸಿದರು.

ಆಡಿಟ್ ವರ್ಗೀಕರಣದಲ್ಲಿಯು ‘ಎ’ ತರಗತಿ ಪಡೆದಿದ್ದು, 2021-22 ನೇ ಸಾಲಿನಲ್ಲಿ 275 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದು,2.22 ಕೋ.ರೂ.ಪಾಲು ಬಂಡವಾಳ ಜಮೆಯಾಗಿದೆ.
ಸಂಘದ ಸದಸ್ಯರ ಅವಶ್ಯಕತೆಗನುಗುಣವಾಗಿ ಒಟ್ಟು 68.55 ಕೋ.ರೂ. ಸಾಲ ವಿತರಿಸಲಾಗಿದೆ.ಈ ಪೈಕಿ 1687 ರೈತ ಸದಸ್ಯರಿಗೆ 32.09 ಕೋ.ರೂ. ಬೆಳೆಸಾಲ, 1054 ರೈತ ಸದಸ್ಯರಿಗೆ 36.46 ಕೋ.ರೂ. ಕೃಷಿ ಅಭಿವೃದ್ದಿ ಸಾಲ ಸಹಿತ ಇನ್ನಿತರ ಸಾಲ ವಿತರಿಸಲಾಗಿದೆ ಎಂದರು

ಸಭೆಯಲ್ಲಿ ಸದಸ್ಯರೊಬ್ಬರು ಸಾಲ ಮನ್ನಾ ಮೊಬಲಗು ಬಾರದಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ
ಬಾಕಿ ಉಳಿದ
ಸಾಲ ಮನ್ನಾ ಶೀಘ್ರದಲ್ಲಿ ಬಿಡುಗಡೆಗೆ ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಬೆಳೆ ವಿಮೆ ಗರಿಷ್ಠ ಸಾಧನೆ:

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ 1556 ಎಕ್ರೆ ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಸುಮಾರು ರೂ 41 ಲಕ್ಷ ಹಣವನ್ನು ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ.

ಸಂಘದ ವ್ಯಾಪ್ತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳ ಪ್ರತಿಭೆಗೆ ನಗದು ಸಹಾಯ ದೊಂದಿಗೆ ಪುರಸ್ಕರಿಸಲಾಯಿತು.
ಸಿದ್ದಕಟ್ಟೆ ಯಲ್ಲಿ ಕ್ಯಾಂಪ್ಕೋ ಶಾಖೆ ಪ್ರಾರಂಭಿಸಲು ಸಂಸ್ಥೆಯನ್ನು ಕೇಳಿಕೊಂಡು ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಮಹಾಸಭೆಯ ವರದಿ ವಾಚಿಸಿ, ವಿಷಯ ಮಂಡಿಸಿದರು.

ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ. ಆರ್. ಪುಜಾರಿ, ಅರಳ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಮಿಧರ ಶೆಟ್ಟಿ,
ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಪೂವಳ, ಪೂಂಜಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಶ್ರೀರಾಮ ವಿದ್ಯಾ ಸಂಸ್ಥೆ ಸುಲ್ಕೆರಿ ಇದರ ಗೌರವ ಅಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ನಿವೃತ್ತ ಲೆಕ್ಕ ಪರಿಶೋಧಕ ಗೋಪಾಲ ರೈ ಸಭೆಯಲ್ಲಿ ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಮಂದಾರತಿ ಎಸ್ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.
ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ಹರೀಶ್ ಆಚಾರ್ಯ ರಾಯಿ, ,ಉಮೇಶ್ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ್ ಸಾಲ್ಯಾನ್, ವೃತ್ತಿಪರ ನಿರ್ದೇಶಕರಾಗಿ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.
………………………

?️ಗೋಪಾಲ ಅಂಚನ್, ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್ ಕರ್ನಾಟಕ