ಹೀರೋ ಡೆಸ್ಟಿನಿ ಎಕ್ಸ್ ಟೆಕ್ 125 ಮಾರುಕಟ್ಟೆಗೆ ಬಿಡುಗಡೆ

ವಿಟ್ಲ: ಹೀರೋ ವೆಸ್ಟ್ ಕೋಸ್ಟ್ ಮೋಟಾರ್ಸ್ ವಿಟ್ಲ ಶಾಖೆಯಲ್ಲಿ ನೂತನ ಡೆಸ್ಟಿನಿ ವೆಕ್ಸ್ ಟೆಕ್ 125 ದ್ವಿಚಕ್ರ ವಾಹನ ಸೋಮವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಅಶ್ರಫ್ ನೂತನ ವಾಹನವನ್ನು ಬಿಡುಗಡೆಗೊಳಿಸಿದರು.
ಹೀರೋ ಸಂಸ್ಥೆಯ ವಾಹನಗಳು ಈಗಾಗಲೇ ಉತ್ತಮ ಗುಣಮಟ್ಟ ಹಾಗೂ ವಿಶಿಷ್ಠ ವಿನ್ಯಾಸದೊಂದಿಗೆ ಗ್ರಾಹಕರ ಮನೆ ಮಾತಾಗಿದೆ. ನೂತನ ವಾಹನವು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ ಎಂದು ಅವರು ಹೇಳಿದರು.
ಹೀರೋ ವೆಸ್ಟ್ ಕೋಸ್ಟ್ ಮೋಟಾರ್ಸ್ ಜನರಲ್ ಮ್ಯಾನೇಜರ್ ಸಂದೀಪ್ ಅವರು ಪ್ರಥಮ ಖರೀದಿ ಗ್ರಾಹಕರಿಗೆ ಕೀ ಹಸ್ತಾಂತರಿಸಿದರು. ನೂತನ ವಾಹನವು ಸವಾರರ ಅನುಕೂಲಕ್ಕಾಗಿ ಅನೇಕ ವಿಶೇಷ ಸೌಲಭ್ಯಗಳನ್ನು ಒಳಗೊಂಡು ವಿಶಿಷ್ಠವಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.

ಮುಡಿಪು ಬ್ರಾಂಚ್ ಮ್ಯಾನೇಜರ್ ಪ್ರಶಾಂತ್, ಪ್ರಥಮ ಗ್ರಾಹಕರಾದ ಬಿ.ಕೆ.ಮುಸ್ಲಿಯಾರ್, ಪ್ರತಿಮ ಗೋಪಾಲ ಅಂಚನ್ ಆಲದಪದವು, ಜಯಾನಂದ ಗಟ್ಟಿ ಪೊರಿಗುಡ್ಡೆ ಮತ್ತು ಹರೀಶ್ ಕೋಟ್ಯಾನ್ ಅಂದ್ರಳಿಕೆ ಸಹಿತ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಟ್ಲ ಬ್ರಾಂಚ್ ಇನ್ಚಾರ್ಜ್ ಅಶ್ವಿತ್ ಸ್ಚಾಗತಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.