ಎಸ್.ಎಸ್.ಎಲ್.ಸಿ, ನಮ್ಮೂರ ಸಾಧಕರು: ಎ.ಜತಿಸ್ ಕೃಷ್ಣ ಕೆ.ಎಸ್., ನಿಖಿಲ್ ಸಿ., ಮಾನಸ, ಶಮಾ, ಪೂಜಾ, ಪ್ರಮೀತ

ವಾಮದಪದವು:
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮೂರಿನ ಹಲವು ವಿದ್ಯಾರ್ಥಿಗಳು ವಿಶೇಷ ಸಾಧನೆಗೈದು ನಮ್ಮೂರಿಗೆ ಕೀರ್ತಿ ತಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎ.ಜತಿಸ್ ಕೃಷ್ಣ ಕೆ.ಎಸ್., ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ರಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾನೆ.
ಈತ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ನಿವಾಸಿಗಳಾದ ಎ.ಕೃಷ್ಣಪ್ಪ ಪೂಜಾರಿ ಮತ್ತು ಡಾ.ಸವಿತಾ ದಂಪತಿಯ ಪುತ್ರ.


…….

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿಖಿಲ್ ಸಿ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ರಲ್ಲಿ 616 ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾನೆ.
ಈತ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಗಮೆ ನಿವಾಸಿಗಳಾದ ವಿ.ಚಂದಪ್ಪ ಪೂಜಾರಿ ಮತ್ತು ಮತ್ತು ಮಮತ ಕೆ.ಎಸ್. ದಂಪತಿಯ ಪುತ್ರ.


…………

ಮದ್ವ ನಿವಾಸಿಗಳಾದ ಉದಯ ಕುಮಾರ್ ಮತ್ತು ಜಯಮಾಲ ದಂಪತಿಯ ಪುತ್ರಿಯಾದ ಮಾನಸ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 612 ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾಳೆ.
ಈಕೆ ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ.


……….
ಪಿಲಿಮೊಗರು ಗ್ರಾಮದ ಮುದ್ದು ಪೂಜಾರಿ ಮತ್ತು ಶಂಕರಿ ದಂಪತಿಗಳ ಪುತ್ರಿ ಕು. ಶಮಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 609 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾಳೆ. ಈಕೆ ವಾಮದಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ.


……….
ವಾಮದಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಪೂಜಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 609 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾಳೆ.
ಈಕೆ ಕುಡಂಬೆಟ್ಟು ಗ್ರಾಮದ ಹರ್ಕಾಡಿ ನಿವಾಸಿಗಳಾದ ಆನಂದ ಆಚಾರ್ಯ ಮತ್ತು ಶುಭ ದಂಪತಿಗಳ ಪುತ್ರಿ.


..,……..

ವಾಮದಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಪ್ರಮಿತ ಅವರು 588 ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.
ಈಕೆ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ನಿವಾಸಿಗಳಾದ ಶ್ರೀ ಲಕ್ಷ್ಮಣ ಪೂಜಾರಿ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ.


……………..

………,….


……………..
ಎಲ್ಲಾ ಪ್ರತಿಭಾವಂತರಿಗೆ ಯುವಧ್ವನಿ ಬಳಗ ಅಭಿನಂದನೆ ಸಲ್ಲಿಸುವುದರೊಂದಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತದೆ.
……………….

ಗೋಪಾಲ ಅಂಚನ್
ಸಂಪಾದಕರು
ಯುವಧ್ವನಿ ನ್ಯೂಸ್
9449104318


………….