ಪಾಂಗಲ್ಪಾಡಿಯಲ್ಲಿ ಉಚಿತ ವಸಂತ ತರಗತಿ ಶಿಬಿರ ಉದ್ಘಾಟನೆ

ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಶಾಖೆಯ ವತಿಯಿಂದ ಸತ್ಯನಾರಾಯಣ ಸಭಾಂಗಣದಲ್ಲಿ ನಡೆಯುವ ಮಕ್ಕಳ 12 ದಿನಗಳ ಉಚಿತ ವಸಂತ ತರಗತಿ ಶಿಬಿರವು ಬುಧವಾರ ಉದ್ಘಾಟನೆಗೊಂಡಿತು. ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ … Read More

ಎಪ್ರಿಲ್ 6ರಂದು ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ರಾಮತಾರಕ ಮಂತ್ರ ಯಾಗ

ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಎಪ್ರಿಲ್ 6ರಂದು ಪ್ರತಿಷ್ಠಾ ಮಹೋತ್ಸವ ಹಾಗೂ ರಾಮತಾರಕ ಮಂತ್ರ ಯಾಗ ನಡೆಯಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಭಜನಾ ತಂಡಗಳಿಂದ ಉದಯಾಸ್ತಮಾನ ಭಜನೆ, ಬೆಳಿಗ್ಗೆ 8ರಿಂದ ಗಣಯಾಗ, ರಾಮತಾರಕ … Read More

ಬಿಜೆಪಿಯ ಸುಳ್ಳು ಭರವಸೆಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು, ಮಹಿಳಾ ಸ್ವಾವಲಂಬನೆಗೆ ವಿಶೇಷ ಆಧ್ಯತೆ ನೀಡಿದ ರಮಾನಾಥ ರೈಯವರನ್ನು ಮತ್ತೊಮ್ಮೆ ಮಂತ್ರಿ ಮಾಡಬೇಕು-ಡಾ. ಪುಷ್ಪ ಅಮರನಾಥ್

ಬಂಟ್ವಾಳ: ಬಿಜೆಪಿ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಬಿಜೆಪಿಯ ಸುಳ್ಳು ಭರವಸೆಗಳ ಬಗ್ಗೆ ಮಹಿಳೆಯರು ಜಾಗೃತರಾಗಬೇಕು. ಮಹಿಳಾ ಸ್ವಾವಲಂಬನೆಗೆ ವಿಶೇಷ ಆಧ್ಯತೆ ನೀಡಿದ ಬಿ.ರಮಾನಾಥ ರೈಯವರನ್ನು ಗೆಲ್ಲಿಸಿ ಮತ್ತೊಮ್ಮೆ ಮಂತ್ರಿಯಾಗುವಲ್ಲಿ ಮಹಿಳೆಯರು ವಿಶೇಷ ಶ್ರಮ ವಹಿಸಬೇಕು … Read More

ಸಿರಿಗುಂಡದಪಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯಲ್ಲಿ ಎಪ್ರಿಲ್ 27ರಿಂದ 29ರವರೆಗೆ ಬ್ರಹ್ಮಕಲಶೋತ್ಸವ-ಸಮಾಲೋಚನಾ ಸಭೆ

ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ-ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆಯು ಜೀರ್ಣೋದ್ಧಾರಗೊಳ್ಳುತ್ತಿದ್ದು, ಎಪ್ರಿಲ್ 27ರಿಂದ 29ರವರೆಗೆ ಬ್ರಹ್ಮಕಲಶೋತ್ಸವ ನಡೆಯುವ ಹಿನ್ನೆಲೆಯಲ್ಲಿ ಭಾನುವಾರ ಸಮಾಲೋಚನಾ ಸಭೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ ಮಾತನಾಡಿ … Read More

ಎಪ್ರಿಲ್ 2ರಂದು ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಆಶ್ರಯದಲ್ಲಿ “ಮಾತೃಶಕ್ತಿ” ಬೃಹತ್ ಮಹಿಳಾ ಸಮಾವೇಷ

ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಎಪ್ರಿಲ್ 2ರಂದು ಬೆಳಿಗ್ಗೆ 9ಗಂಟೆಯಿಂದ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ “ಮಾತೃಶಕ್ತಿ” ಬೃಹತ್ ಮಹಿಳಾ ಸಮಾವೇಷ ನಡೆಯಲಿದೆ ಎಂದು ಪಾಣೆಮಂಗಳೂರು ಬ್ಲಾಕ್ ಮಹಿಳಾ … Read More

ಎಪ್ರಿಲ್ 2ರಂದು ಅಜ್ಜಿಬೆಟ್ಟು ಶ್ರೀ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಬಿಂಬ ಪ್ರತಿಷ್ಠಾ ಮಹೋತ್ಸವದ 31ನೇ ವರ್ಧಂತ್ಯುತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಬಸದಿಯಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಬಿಂಬ ಪ್ರತಿಷ್ಠಾ ಮಹೋತ್ಸವದ 31ನೇ ವರ್ಧಂತ್ಯುತ್ಸವವು ಎಪ್ರಿಲ್ 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ. ಬೆಳಿಗ್ಗೆ 9ರಿಂದ ಶ್ರೀ ಆದಿನಾಥ ತೀರ್ಥಂಕರರ ಪ್ರತಿಷ್ಠೆ, ಶ್ರೀ ವೃಷಭಾದಿ -ಅನಂತನಾಥ ತೀರ್ಥಂಕರರ ಆರಾಧನೆ, … Read More

ಮಾರ್ಚ್ 30ರಂದು ನಯನಾಡು ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಏಕಾಹ ಭಜನೆ

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ನಯನಾಡು ಶ್ರೀ ರಾಮ ಭಜನಾ ಮಂದಿರದಲ್ಲಿ ಮಾರ್ಚ್ 30ರಂದು ಶ್ರೀ ರಾಮ ನವಮಿಯ ಪ್ರಯುಕ್ತ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ದೇವರ … Read More

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ ನಿರ್ಮಾಣಕ್ಕೆ ಶಿಲಾನ್ಯಾಸ-ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ: ದೇವರ ಅನುಗ್ರಹವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ವಿಜಯ ಸಾಧಿಸಬಹುದು.ರಾಯಿ ಕ್ಷೇತ್ರದ ಪುನರ್ ನಿರ್ಮಾಣದ ಕೈಂಕರ್ಯದಲ್ಲೂ ದೇವರ ಅನುಗ್ರಹ ಪ್ರಾಪ್ತವಾಗಲಿ. ದೇವಸ್ಥಾನ ಜೀರ್ಣೋದ್ಧಾರದ ಪುಣ್ಯ ಕಾರ್ಯದಲ್ಲಿ ಸಮಸ್ತ ಜನತೆಯ ಸಂಘಟಿತ ಪ್ರಯತ್ನ ಸಾಗಲಿ ಎಂದುಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ … Read More

ಪಿಲಿಮೊಗರು-ವಾಮದಪದವಿನಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟನೆ

ಬಂಟ್ವಾಳ: ಕರ್ಣಾಟಕ ಬ್ಯಾಂಕಿನ 907ನೇ ಶಾಖೆ ಮತ್ತು ಮಿನಿ ಇ-ಲಾಬಿಯು ಪಿಲಿಮೊಗರು ಗ್ರಾಮದ ವಾಮದಪದವು ಕಳಸಡ್ಕ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ಚೆನ್ನೈತ್ತೋಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ಸೇವೆಗೆ ಹೆಸರಾಗಿರುವ … Read More

ಬಡಜನರ ಬದುಕುವ ಹಕ್ಕನ್ನೇ ಕಸಿಯುತ್ತಿರುವ ಬಿಜೆಪಿ ಸರಕಾರ “ಉಳ್ಳವನೇ ಒಡೆಯ” ನೀತಿ ಅನುಸರಿಸುತ್ತಿದೆ- ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಬಿ.ಕೆ.ಹರಿಪ್ರಸಾದ್ ಟೀಕೆ

ಬಂಟ್ವಾಳ: ಕಾಂಗ್ರೇಸ್ ಪಕ್ಷ ಬಡವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದಲ್ಲದೆ ಉಳುವವನೇ ಒಡೆಯ ನೀತಿ ಮಾಡಿತ್ತು. ಆದರೆ ಬಿಜೆಪಿ ಬಡವರ ಬದುಕುವ ಹಕ್ಕನ್ನೂ ಕಸಿದು ಬಂಡವಾಳಶಾಹಿಗಳ ಜತೆ ನಿಂತು ಉಳ್ಳವನೇ ಒಡೆಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ತು ವಿರೋಧ ಪಕ್ಷದ … Read More